ಮದಗಜಗಳ ಕಾದಾಟಕ್ಕೆ ಹೆದರದೆ ಅಖಾಡಕ್ಕಿಳಿದ ನಾಯಿ: ಆನೆಗಳನ್ನೇ ದಿಕ್ಕುತಪ್ಪಿಸಿದ ಸಾಕು ಪ್ರಾಣಿಯ ಧೈರ್ಯ, ವಿಡಿಯೋ ವೈರಲ್!

ದೈತ್ಯ ಆನೆಗಳೆಂದರೆ ಇಡೀ ಊರೇ ನಡುಗುತ್ತದೆ, ಅಂಥದ್ದರಲ್ಲಿ ಪರಸ್ಪರ ಸದೆಬಡಿಯಲು ಮುಖಾಮುಖಿಯಾದ ಎರಡು ಬೃಹತ್ ಮದಗಜಗಳ ಕಾದಾಟದ ನಡುವೆ ಸಣ್ಣ ಸಾಕು ನಾಯಿಯೊಂದು ಧುಮುಕಿದರೆ ಏನಾಗಬಹುದು? ಹಾಸನದ ಬೇಲೂರು ಬಳಿ ನಡೆದ ಈ ಅಚ್ಚರಿಯ ಹಾಗೂ ಮೈನವಿರೇಳಿಸುವ ಘಟನೆ ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿದೆ.
Pet Dog Fearlessly Intervenes To Stop Fierce Fight Between Two Wild Elephants In Hassan
ಮದಗಜಗಳ ಕಾದಾಟಕ್ಕೆ ಹೆದರದೆ ಅಖಾಡಕ್ಕಿಳಿದ ನಾಯಿOnline Desk
Updated on: 

ಜಗಬೋರನಹಳ್ಳಿ (ಹಾಸನ): ದೈತ್ಯ ಆನೆ ಎಲ್ಲಿ, ಎಳಸು ನಾಯಿ ಎಲ್ಲಿ? ಆದರೆ, ಎರಡು ದೈತ್ಯ ಕಾಡಾನೆಗಳ ನಡುವೆ ನಡೆಯುತ್ತಿದ್ದ ಭೀಕರ ಕಾದಾಟವನ್ನು ಶ್ವಾನವೊಂದು ಮಧ್ಯಪ್ರವೇಶಿಸಿ ಬಿಡಿಸಿರುವ ಅಪರೂಪದ ಹಾಗೂ ರೋಮಾಂಚನಕಾರಿ ಘಟನೆ ನಡೆದಿದೆ. ಹೌದು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದ ಬಳಿ  ಎರಡು ಕಾಡಾನೆಗಳ ಭೀಕರ ಕಾದಾಟ ನಡೆಯುತಿತ್ತು. ಆದರೆ, ಈ ವೇಳೆ ಮಧ್ಯಪ್ರವೇಶಿಸಿದ ನಾಯಿಯೊಂದು ಬೊಗಳುತ್ತಾ ಆನೆಗಳ ಜಗಳವನ್ನು ಬಿಡಿಸಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಮದಗಜಗಳ ಕಾಳಗ

ಕಾಡಾನೆಗಳ ಹಿಂಡಿನಿಂದ ಹೊರಬಂದಿದ್ದ ಎರಡು ಪ್ರಾಯದ ಬೃಹತ್ ಮದಗಜಗಳು ಜಗಬೋರನಹಳ್ಳಿ ಗ್ರಾಮದ ತೋಟದ ಬಳಿ ಮುಖಾಮುಖಿಯಾಗಿ ಒಂದನ್ನೊಂದು ಸದೆಬಡಿಯಲು ಭೀಕರವಾಗಿ ಕಾದಾಡುತ್ತಿದ್ದವು. ದಂತಗಳಿಂದ ಪರಸ್ಪರ ತಿವಿಯುತ್ತಾ ಆನೆಗಳು ತೀವ್ರ ಆಕ್ರೋಶದೊಂದಿಗೆ ಜಗಳವಾಡುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಭಾರೀ ಭೀತಿ ಸೃಷ್ಟಿಸಿತ್ತು. ಆದರೆ, ದೈತ್ಯ ಆನೆಗಳು ಜಗಳವಾಡುತ್ತಿದ್ದ ಜಾಗಕ್ಕೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟ ಸಾಕು ನಾಯಿಯೊಂದು, ಕಿಂಚಿತ್ತೂ ಹೆದರದೆ, ಆನೆಗಳ ಸುತ್ತಲೂ ಓಡಾಡುತ್ತಾ ಗಟ್ಟಿಯಾಗಿ ಬೊಗಳಲು ಆರಂಭಿಸಿದೆ. ಇನ್ನು, ನಾಯಿಯ ಸತತ ಬೊಗಳಾಟ ಹಾಗೂ ಆಕ್ರಮಣಕಾರಿ ನಡವಳಿಕೆಯಿಂದ ದಿಕ್ಕುತಪ್ಪಿದ ಕಾಡಾನೆಗಳು, ತಕ್ಷಣವೇ ತಮ್ಮ ನಡುವಿನ ಜಗಳವನ್ನು ನಿಲ್ಲಿಸಿವೆ. ಏತನ್ಮಧ್ಯೆ,  ಆನೆಗಳ ಕಾದಾಟವನ್ನು ನಿಯಂತ್ರಿಸಲು ಹಾಗೂ ಅವುಗಳನ್ನು ಶಾಂತಗೊಳಿಸಲು ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಹರಸಾಹಸ ಪಡುತ್ತಿದ್ದರು. ಈ ಮಧ್ಯೆ ಶ್ವಾನವು ನಿರಂತರವಾಗಿ ಬೊಗಳಿ ಆನೆಗಳ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದು ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಗಿದೆ.

Pet Dog Fearlessly Intervenes To Stop Fierce Fight Between Two Wild Elephants In Hassan
ಹಾಸನದಲ್ಲಿ ಟೈಯರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಸಿಮೆಂಟ್ ಲಾರಿ: ಹೆದ್ದಾರಿಯಲ್ಲಿ ಬಿದ್ದಿದ್ದ ನೂರಾರು ಚೀಲಗಳನ್ನು ಹೊತ್ತೊಯ್ದ ಜನ!

ಒಟ್ಟಾರೆಯಾಗಿ, ನಾಯಿಯು ಆನೆಗಳ ಕಾಳಗದ ನಡುವೆ ನುಗ್ಗಿದ ಈ ಅಪರೂಪದ ಹಾಗೂ ರೋಮಾಂಚಕ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com