ಮಂಗಳೂರು: ಬೇಡಿಕೊಂಡರು 40ರ ವಿವಾಹಿತ ಧರ್ಮಗುರು ಜೊತೆ ಹೋದ 22ರ ಯುವತಿ; ಬಿಕ್ಕಿಬಿಕ್ಕಿ ಅತ್ತ ಪೋಷಕರು!

ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ ಬೆನ್ನಲ್ಲೇ ಮದರಸಾದ ವಿವಾಹಿತ ಧರ್ಮಗುರು ಜೊತೆ ಪ್ರತ್ಯಕ್ಷಳಾಗಿದ್ದಾಳೆ. ಮಂಗಳೂನ ಕೊಣಾಜೆ ಪೊಲೀಸ್ ಠಾಣೆಗೆ ಬಂದ ಯುವತಿ ಪೋಷಕರು ಎಷ್ಟೇ ಬೇಡಿಕೊಂಡರು. ಅದಕ್ಕೆ ತಲೆಕೊಡದೆ ಧರ್ಮಗುರುವಿನ ಜೊತೆ ಹೋಗಲು ನಿರ್ಧರಿಸಿದ್ದಳು.
ಧರ್ಮಗುರು ಜೊತೆ ಹೋದ ಯುವತಿ
ಧರ್ಮಗುರು ಜೊತೆ ಹೋದ ಯುವತಿ
Updated on: 

ಮಂಗಳೂರು: ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ ಬೆನ್ನಲ್ಲೇ ಮದರಸಾದ ವಿವಾಹಿತ ಧರ್ಮಗುರು ಜೊತೆ ಪ್ರತ್ಯಕ್ಷಳಾಗಿದ್ದಾಳೆ. ಮಂಗಳೂನ ಕೊಣಾಜೆ ಪೊಲೀಸ್ ಠಾಣೆಗೆ ಬಂದ ಯುವತಿ ಪೋಷಕರು ಎಷ್ಟೇ ಬೇಡಿಕೊಂಡರು. ಅದಕ್ಕೆ ತಲೆಕೊಡದೆ ಧರ್ಮಗುರುವಿನ ಜೊತೆ ಹೋಗಲು ನಿರ್ಧರಿಸಿದ್ದಳು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟಗುಳಿಯ ನಿವಾಸಿ ದಾವುದ್ ಖಾಸಿಂ ಎಂಬುವರ ಪುತ್ರಿ 22 ವರ್ಷದ ಮಗದುಮ್ಮ ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸ ಅದಿ ಎಂಬ ಧರ್ಮಗುರು ಜೊತೆ ತೆರಳಿದ್ದಾಳೆ. ತಮ್ಮ ಮಗಳು ಬಿಟ್ಟುಹೋಗುತ್ತಿರುವುದನ್ನು ನೋಡಿದ ಪೋಷಕರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಧರ್ಮಗುರು ಜೊತೆ ಹೋದ ಯುವತಿ
ಬೆಂಗಳೂರು: ಆರೇ ಗಂಟೆಯಲ್ಲಿ ಅಪಹರಣ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಟೆಕ್ಕಿಗಳ ರಕ್ಷಣೆ, 11 ಮಂದಿ ಬಂಧನ

ಧರ್ಮಗುರು ಅಶ್ರಫ್ ಸ ಅದಿಗೆ ಅದಾಗಲೇ ಮದುವೆಯಾಗಿ ಮಕ್ಕಳಿವೆ. ಯುವತಿ ವಯಸ್ಕಳಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ತನ್ನು ಆಯ್ಕೆಯನ್ನು ತಿಳಿಸುವಂತೆ ಸೂಚಿಸಿದ್ದಾರೆ. ಈ ವೇಳೆ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಮನವೊಲಿಸಲು ಪ್ರಯತ್ನಿಸಿದರೂ ಯುವತಿ ತನ್ನ ನಿರ್ಧಾರ ಬದಲಿಸಿಲ್ಲ. ಕೊನೆಗೆ ಧರ್ಮಗುರು ಜೊತೆಗೆ ಯುವತಿ ತೆರಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X