ಕರ್ನಾಟಕದ ಎರಡು ಇತಿಹಾಸಪೂರ್ವ ತಾಣಗಳು: NCERT ಪಠ್ಯಕ್ರಮ ಸೇರ್ಪಡೆ

ಅಧ್ಯಯನದ ಭಾಗವಾಗಿ ವಿದ್ಯಾರ್ಥಿಗಳಿಗೆ ಮಾನವನ ವಿಕಾಸ, ಅವರ ಜೀವನಶೈಲಿ ಹಾಗೂ ಅವರು ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದ ರೀತಿಯ ಬಗ್ಗೆ ಪರಿಚಯಿಸಲಾಗುತ್ತದೆ.
Skulls of homo erectus and homo sapiens sourced from Robert Bruce Foote Sanganakallu Archaeological Museum
ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯದಿಂದ ಪಡೆಯಲಾದ ಹೋಮೋ ಎರೆಕ್ಟಸ್ ಮತ್ತು ಹೋಮೋ ಸ್ಯಾಪಿಯನ್ಸ್‌ಗಳ ತಲೆಬುರುಡೆಗಳು.
Updated on

ಬಳ್ಳಾರಿ: ಕರ್ನಾಟಕದ ಎರಡು ಇತಿಹಾಸಪೂರ್ವ ತಾಣಗಳಾದ ಯಾದಗಿರಿ ಜಿಲ್ಲೆಯ ಇಸ್ಲಾಂಪುರ ಮತ್ತು ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ತಾಣಗಳು ಇನ್ನು ಮುಂದೆ ವಿದ್ಯಾರ್ಥಿಗಳ ಅಧ್ಯಯನ ಪಾಠವಾಗಲಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಈ ತಾಣಗಳನ್ನು ತನ್ನ ಪಠ್ಯಕ್ರಮದಲ್ಲಿ ಸೇರಿಸಿದೆ.

9ನೇ ತರಗತಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ‘Early humans and beginning of civilisation’ ಎಂಬ ಅಧ್ಯಾಯದಲ್ಲಿ ಈ ತಾಣಗಳನ್ನು ಸೇರಿಸಲಾಗಿದೆ.

Skulls of homo erectus and homo sapiens sourced from Robert Bruce Foote Sanganakallu Archaeological Museum
'ಕೃಷ್ಣ' ಹೆಸರು ನದಿಯಿಂದ ಪ್ರೇರಿತವಾದದ್ದು, ದೇವರಿಂದಲ್ಲ; 'ಕೇಸರೀಕರಣ' ಆರೋಪಕ್ಕೆ NCERT ತಿರುಗೇಟು..!

ಅಧ್ಯಯನದ ಭಾಗವಾಗಿ ವಿದ್ಯಾರ್ಥಿಗಳಿಗೆ ಮಾನವನ ವಿಕಾಸ, ಅವರ ಜೀವನಶೈಲಿ ಹಾಗೂ ಅವರು ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದ ರೀತಿಯ ಬಗ್ಗೆ ಪರಿಚಯಿಸಲಾಗುತ್ತದೆ.

ಇತ್ತೀಚಿನವರೆಗೂ ಪುರಾತತ್ವಶಾಸ್ತ್ರವನ್ನು ಪಠ್ಯಕ್ರಮದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಪ್ರಮುಖ ಅಧ್ಯಾಯವಾಗಿ ಸೇರಿಸಲಾಗಿದೆ. ಇತಿಹಾಸಪೂರ್ವ ಪುರಾತತ್ವಶಾಸ್ತ್ರವು ಮಾನವನ ಉದಯ ಮತ್ತು ಆರಂಭಿಕ ನಾಗರಿಕತೆಗಳ ಬೆಳವಣಿಗೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com