ರೇಣುಕಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿ ಪ್ರದೂಷ್ ರಾವ್ ಕಳ್ಳಾಟ ಬಯಲು; ದರ್ಶನ್ ಗ್ಯಾಂಗ್​ಗೆ ಶಾಕ್ ಕೊಟ್ಟಿದ್ದ ಪ್ರದೂಷ್ ಮೇಲೆ ಬಿತ್ತು ಮತ್ತೊಂದು ಕೇಸ್!

Renukaswamy Murder Case: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರದೂಷ್, ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತನ್ನ ಪತ್ನಿಯೊಂದಿಗೆ ಮಾತನಾಡಲು ಜೈಲಿನ ಬಿಡುಗಡೆಯಾದ ಬೇರೊಬ್ಬ ಕೈದಿಯ ಸವಲತ್ತನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
Renukaswamy Murder Case: Accused Pradoosh Rao Lands in Fresh Trouble for Misusing Bengaluru Jail Phone Facility
ಜೈಲಿನಲ್ಲೇ ಪತ್ನಿ ಜೊತೆ ಪ್ರದೂಷ್ ರಾವ್ ಕಳ್ಳಾಟ! ಮಾಜಿ ಕೈದಿ ಹೆಸರಿನಲ್ಲಿ ಇಂಟರ್‌ಕಾಮ್ ದುರ್ಬಳಕೆOnline Desk
Updated on

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿಯಾಗಿ ಜೈಲು ಪಾಲಾಗಿರುವ ಪ್ರದೂಷ್ ರಾವ್, ಮಾಫಿ ಸಾಕ್ಷಿಯಾಗುವ ಮೂಲಕ ದರ್ಶನ್ ಅಂಡ್ ಗ್ಯಾಂಗ್​ಗೆ ಮುಗ್ಗಲು ಮುಳುಗಿದ್ದಾನೆ. ಈ ನಡುವೆಯೇ, ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ, ಕಳ್ಳಾಟದ ಮೂಲಕ ಪತ್ನಿಯೊಂದಿಗೆ ಮಾತನಾಡಲು ಪ್ರದೂಷ್ ಬಳಸಿದ ಚಾಲಾಕಿ ತನ ಈಗ ಬಯಲಾಗಿದೆ. ಇದರಿಂದ ಪ್ರದೂಷ್ ಮೇಲೆ ರೇಣುಕಸ್ವಾಮಿ ಕೊಲೆ ಪ್ರಕರಣದ ಜೊತೆಗೆ ಮತ್ತೊಂದು ದೂರು ಕೂಡ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರದೂಷ್ ಕಳ್ಳಾಟ ಬಯಲು

ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿಯಾಗಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರದೂಷ್ ರಾವ್, ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ತನ್ನ ಪತ್ನಿಯೊಂದಿಗೆ ಮಾತನಾಡಲು ಜೈಲಿನಿಂದ ಬಿಡುಗಡೆಯಾದ ಬೇರೊಬ್ಬ ಕೈದಿಯ ಸವಲತ್ತನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಹೀಗೆ,  ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಕೈದಿಯೊಬ್ಬನ ಹೆಸರನ್ನು ಬಳಸಿಕೊಂಡು ಪ್ರದೂಷ್ ತನ್ನ ಪತ್ನಿಯ ಮೊಬೈಲ್ ಸಂಖ್ಯೆಯನ್ನು ಜೈಲಿನ ಇನ್‌ಮೇಟ್ ಕಾಲಿಂಗ್ ವ್ಯವಸ್ಥೆಯಲ್ಲಿ 'ಸಂತೋಷ್' ಎಂಬ ಹೆಸರಿನಲ್ಲಿ ನೋಂದಾಯಿಸಿದ್ದನು.

ಈ ಕಳ್ಳಾಟದ ಮೂಲಕ ಜೈಲಿನಲ್ಲಿದ್ದುಕೊಂಡೇ ಪ್ರದೂಷ್ ತನ್ನ ಪತ್ನಿಯೊಂದಿಗೆ ನಿಯಮಬಾಹಿರವಾಗಿ ಕರೆ ಮಾಡಿ ದೀರ್ಘಕಾಲ ಮಾತನಾಡುತ್ತಿದ್ದನು ಎನ್ನಲಾಗಿದೆ. ಜೊತೆಗೆ, ಈ ಇಡೀ ಕೃತ್ಯಕ್ಕೆ ಜೈಲಿನ ಸಿಬ್ಬಂದಿಯಾದ ಮೌನೇಶ್ ಎಂಬುವವರು ಪ್ರದೂಷ್‌ಗೆ ಸಂಪೂರ್ಣ ಸಹಕಾರ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

Renukaswamy Murder Case: Accused Pradoosh Rao Lands in Fresh Trouble for Misusing Bengaluru Jail Phone Facility
ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ; ಫಾರ್ಮ್‌ಹೌಸ್ ಪಕ್ಷಿ ವಿವಾದದಲ್ಲಿ ಕೋರ್ಟ್‌ನಿಂದ ಸಮನ್ಸ್ ಜಾರಿ

ಮುಂದುವರೆದು, ಈ ಇಂಟರ್‌ಕಾಮ್ ದುರ್ಬಳಕೆ ಪ್ರಕರಣ ಹೊರಬರುತ್ತಿದ್ದಂತೆಯೇ ಜೈಲು ಅಧಿಕಾರಿಗಳು ತನಿಖೆ ನಡೆಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಲ್ಲೂ, ನಟ ದರ್ಶನ್ ತಳುಕು ಹಾಕಿಕೊಂಡಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಮಾಫಿ ಸಾಕ್ಷಿಯಾಗಲು ಪ್ರದೂಷ್ ಮುಂದಾಗಿದ್ದನು. ಆದರೆ ಜೈಲಿನಲ್ಲೇ ಈ ರೀತಿ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿರುವುದರಿಂದ ಆತನಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com