ಪ್ರೇಮ ವಿವಾಹಕ್ಕೆ ಯುವತಿಯ ಕುಟುಂಬಸ್ಥರ ವಿರೋಧ: ಅಪಹರಣಕ್ಕೆ ಯತ್ನ, ರಸ್ತೆ ಅಪಘಾತದಿಂದ ಆರು ಮಂದಿಗೆ ಗಾಯ; Video

ರಾಜಸ್ಥಾನ ಮೂಲದ ಪೂಜಾ (21ವ) ಅದೇ ರಾಜ್ಯದ 23 ವರ್ಷದ ಓಂ ಪ್ರಕಾಶ್ ಅವರನ್ನು ಸುಮಾರು 8-9 ತಿಂಗಳ ಹಿಂದೆ ವಿವಾಹವಾಗಿದ್ದರು. ಕುಟುಂಬದವರ ವಿರೋಧದ ನಡುವೆಯೇ ಇಬ್ಬರೂ ಪ್ರೇಮ ವಿವಾಹವಾಗಿದ್ದು, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು.
Six people were injured in the collisions and are undergoing treatment.
ಕಾರು ಅಪಘಾತದಲ್ಲಿ 6 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
Updated on

ಬೆಂಗಳೂರು: ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿದ ಯುವಕನನ್ನು ವಿವಾಹವಾದ 21 ವರ್ಷದ ಯುವತಿಯನ್ನು ಆಕೆಯ ಕುಟುಂಬದವರು ಕಳುಹಿಸಿದ್ದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಮನೆಯಿಂದ ಸಿನಿಮೀಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಆರೋಪಿಗಳು ಕಾರನ್ನು ಹಲವು ವಾಹನಗಳಿಗೆ ಡಿಕ್ಕಿ ಹೊಡೆಸಿಕೊಂಡು ಪರಾರಿಯಾಗಲು ಯತ್ನಿಸಿದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.

ರಾಜಸ್ಥಾನ ಮೂಲದ ಪೂಜಾ (21ವ) ಅದೇ ರಾಜ್ಯದ 23 ವರ್ಷದ ಓಂ ಪ್ರಕಾಶ್ ಅವರನ್ನು ಸುಮಾರು 8-9 ತಿಂಗಳ ಹಿಂದೆ ವಿವಾಹವಾಗಿದ್ದರು. ಕುಟುಂಬದವರ ವಿರೋಧದ ನಡುವೆಯೇ ಇಬ್ಬರೂ ಪ್ರೇಮ ವಿವಾಹವಾಗಿದ್ದು, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಬೆಂಗಳೂರಿನ ಪೊಲೀಸರ ಪ್ರಕಾರ, ಈ ವಿವಾಹವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಪೂಜಾ ಅವರ ಕುಟುಂಬದವರು ನಿನ್ನೆ ಸಂಜೆ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಲು ನಾಲ್ವರು ವ್ಯಕ್ತಿಗಳನ್ನು ಅಗ್ರಹಾರ ದಾಸರಹಳ್ಳಿಯಲ್ಲಿರುವ ದಂಪತಿಯ ಮನೆಗೆ ಕಳುಹಿಸಿದ್ದರು.

Six people were injured in the collisions and are undergoing treatment.
ಬೆಳಗಾವಿ: ಆಸ್ತಿ ವಿವಾದ ಸಂಬಂಧ ಗ್ರಾಮ ಪಂಚಾಯ್ತಿಗೆ ಬಂದಿದ್ದ ಮಾಜಿ ಯೋಧ, ಪುತ್ರಿಯ ಬರ್ಬರ ಹತ್ಯೆ

ನಾಲ್ವರು ವ್ಯಕ್ತಿಗಳು ದಂಪತಿಯ ಮನೆಗೆ ತೆರಳಿ ಪೂಜಾ ಅವರನ್ನು ಬಲವಂತವಾಗಿ ಹ್ಯುಂಡೈ ವೆನ್ಯೂ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆಕೆಯ ಕಿರುಚಾಟ ಕೇಳಿದ ಸ್ಥಳೀಯರು ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ.

ಆದರೆ, ಆರೋಪಿಗಳು ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಕೆಲವು ಸ್ಥಳೀಯರು ಇತರ ವಾಹನಗಳಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ಪರಾರಿಯಾಗುವ ವೇಳೆ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಮಹಿಳೆಯೊಬ್ಬರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದೆ.

Six people were injured in the collisions and are undergoing treatment.
'ಓದಿಸಿ, ಬೆಳೆಸಿ, ಪ್ರೀತಿಯಿಂದ ಸಾಕಿದ ನಮಗೆ ದ್ರೋಹ ಮಾಡಬೇಡ': ಪ್ರೇಮ ವಿವಾಹ ಮಾಡಿಕೊಂಡ ಮಗಳ ಕಾಲು ಹಿಡಿದು ಕಣ್ಣೀರಿಟ್ಟ ಪೋಷಕರು

ಸ್ಥಳೀಯರು ಕಾರನ್ನು ಬೆನ್ನಟ್ಟಿ ಯುವತಿಯನ್ನು ರಕ್ಷಿಸಿದರು

ಅಪಹರಣದ ಬಳಿಕ ಸ್ಥಳೀಯರು ಹ್ಯುಂಡೈ ವೆನ್ಯೂ ಕಾರನ್ನು ಬೆನ್ನಟ್ಟಿ ಅದನ್ನು ತಡೆಯಲು ಪ್ರಯತ್ನಿಸಿದ್ದಾರೆ. ತಪ್ಪಿಸಿಕೊಳ್ಳುವುದನ್ನು ತಡೆಯಲು ಸ್ಥಳೀಯರು ಕಾರಿನ ಮೇಲೆ ಕಲ್ಲು ತೂರಿದ ಬಳಿಕ ಸಮೀಪದ ಪ್ರದೇಶವೊಂದರಲ್ಲಿ ವಾಹನವನ್ನು ಅಂತಿಮವಾಗಿ ತಡೆದಿದ್ದಾರೆ.

ಘಟನೆ ಪ್ರತ್ಯಕ್ಷದರ್ಶಿಯೊಬ್ಬರು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕಾರನ್ನು ತಡೆಯಲು ಪ್ರಯತ್ನಿಸಿದ ಕೆಲವರ ಮೇಲೆ ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಆದರೆ, ವಾಹನ ಡಿಕ್ಕಿಯಿಂದ ಆರು ಮಂದಿ ಗಾಯಗೊಂಡಿರುವುದನ್ನು ಮಾತ್ರ ಪೊಲೀಸರು ಇದುವರೆಗೆ ದೃಢಪಡಿಸಿದ್ದಾರೆ.

ಪೂಜಾ ಅವರನ್ನು ಕರೆದೊಯ್ದ ಬಳಿಕ ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೆಲವರು ಕಾರಿನ ಚಕ್ರಗಳಡಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಜಾ ಅವರನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಮೂವರು ಆರೋಪಿಗಳು ಪೊಲೀಸರ ವಶಕ್ಕೆ, ಚಾಲಕ ಪರಾರಿ

ಪೂಜಾ ಅವರನ್ನು ಕರೆದೊಯ್ಯಲು ಬಂದ ನಾಲ್ವರನ್ನು ಸದ್ದಾಂ, ರಾಕೇಶ್, ಕರಣ್ ಮತ್ತು ಅಯಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಕಾರನ್ನು ಚಲಾಯಿಸುತ್ತಿದ್ದ ಸದ್ದಾಂ ಸದ್ಯ ತಲೆಮರೆಸಿಕೊಂಡಿದ್ದಾನೆ. ರಾಜಸ್ಥಾನ ಮೂಲದ ರಾಕೇಶ್ (31), ಕರಣ್ (25) ಮತ್ತು ಅಯಾನ್ (18) ಪೊಲೀಸರ ವಶದಲ್ಲಿದ್ದಾರೆ. ಅಪಹರಣಕ್ಕೆ ಬಳಸಿದ್ದ ಹ್ಯುಂಡೈ ವೆನ್ಯೂ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಹರಣ ಹಾಗೂ ಬಳಿಕ ನಡೆದ ವಾಹನಗಳ ಡಿಕ್ಕಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪೂಜಾ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪೂಜಾ ಮತ್ತು ಓಂ ಪ್ರಕಾಶ್ ಅವರ ಪ್ರೇಮ ವಿವಾಹಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದೇ ಪ್ರಕರಣದ ಪ್ರಮುಖ ಹಿನ್ನೆಲೆಯಾಗಿದ್ದು, ಬೆಂಗಳೂರಿನಿಂದ ಪೂಜಾ ಅವರನ್ನು ಬಲವಂತವಾಗಿ ಕರೆದೊಯ್ಯಲು ನಡೆಸಿದ ಪ್ರಯತ್ನದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com