ಮಂಗಳೂರು: ಕೌಟುಂಬಿಕ ಕಲಹದಿಂದ ಇಬ್ಬರು ಅಪ್ರಾಪ್ತ ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ; ಓರ್ವ ಮಗು ಸಾವು

ನೂರುನ್ನಿಸಾ ಅವರ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೆ, ಅವರ ನಾದಿನಿಯ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Representative Image
ಸಾಂಕೇತಿಕ ಚಿತ್ರ
Updated on

ಮಂಗಳೂರು: ಕೌಟುಂಬಿಕ ಕಲಹದ ನಂತರ ತನ್ನ ಮೂರೂವರೆ ವರ್ಷದ ಮಗ ಮತ್ತು ತನ್ನ ನಾದಿನಿಯ ಮೂರು ವರ್ಷದ ಮಗನನ್ನು ಬಾವಿಗೆ ಎಸೆದ ಆರೋಪದ ಮೇಲೆ 28 ವರ್ಷದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸೆಪ್ಟೆಂಬರ್ 19 ರಂದು ಮಧ್ಯಾಹ್ನದ ಸಮಯದಲ್ಲಿ ಪೆರ್ನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೂರುನ್ನಿಸಾ ಎಂಬ ಮಹಿಳೆ ಫೋನ್ ಕರೆಯಲ್ಲಿ ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗಳದ ನಂತರ, ನೂರುನ್ನಿಸಾ ತನ್ನ ಮನೆಯ ಸಮೀಪವಿದ್ದ ಬಾವಿಗೆ ಆ ಇಬ್ಬರು ಮಕ್ಕಳನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಕೂಡಲೇ ಅಲ್ಲಿಗೆ ಧಾವಿಸಿ, ಬಾವಿಯಿಂದ ಮಕ್ಕಳನ್ನು ರಕ್ಷಿಸಿದ್ದಾರೆ.

ಆದರೆ, ನೂರುನ್ನಿಸಾ ಅವರ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೆ, ಅವರ ನಾದಿನಿಯ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Representative Image
ಬೆಂಗಳೂರು: ಲಾಡ್ಜ್‌ ನಲ್ಲಿ ಮಹಿಳೆ ಶವ ಪತ್ತೆ; ಕೊಲೆ ಶಂಕೆ, ಪತಿಗಾಗಿ ಶೋಧ

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com