NICE toll ಬಳಿ ಹೈಡ್ರಾಮಾ: ಕೋರ್ಟ್ ಆರ್ಡರ್ ನೆಪದಲ್ಲಿ 4 ಗಂಟೆ ರಸ್ತೆ ಬ್ಲಾಕ್ ಮಾಡಿದ ಬೈಕ್ ಸವಾರ; FIR ದಾಖಲು

ಟೋಲ್ ಅಧಿಕಾರಿ ವೈ.ಎಸ್. ಬಸವರಾಜು ನೀಡಿರುವ ದೂರಿನ ಪ್ರಕಾರ, ಅಕ್ಷಯ್ ರೆಡ್ಡಿ ಬೆಳಗ್ಗೆ 11.09ಕ್ಕೆ 14ನೇ ಲೇನ್‌ಗೆ ಆಗಮಿಸಿ, ಟೋಲ್ ಪಾವತಿಯಿಂದ ವಿನಾಯಿತಿ ನೀಡುವ ಹೈಕೋರ್ಟ್ ಆದೇಶ ತಮ್ಮ ಬಳಿ ಇದೆ.
AI Image
ಎಐ ಸೃಷ್ಟಿತ ಚಿತ್ರ
Updated on

ಬೆಂಗಳೂರು: ಟೋಲ್ ಸಿಬ್ಬಂದಿ ಜೊತೆ ಕಿರಿಕ್ ತೆಗೆದು, ಹೈಕೋರ್ಟ್ ಆದೇಶವಿದೆ ಎಂದು ಸುಳ್ಳು ಹೇಳಿ ಸುಮಾರು ನಾಲ್ಕು ಗಂಟೆಗಳ ಕಾಲ ನೈಸ್ ರಸ್ತೆ ಟೋಲ್ ಪ್ಲಾಜಾವನ್ನು ಬಂದ್ ಮಾಡಿದ್ದ ಬೈಕ್ ಸವಾರನ ವಿರುದ್ಧ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸೆಪ್ಟೆಂಬರ್ 15ರಂದು ಘಟನೆ ನಡೆದಿದ್ದು, ಟೋಲ್ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಬೈಕ್ ಸವಾರ ಅಕ್ಷಯ್ ರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಟೋಲ್ ಅಧಿಕಾರಿ ವೈ.ಎಸ್. ಬಸವರಾಜು ನೀಡಿರುವ ದೂರಿನ ಪ್ರಕಾರ, ಅಕ್ಷಯ್ ರೆಡ್ಡಿ ಬೆಳಗ್ಗೆ 11.09ಕ್ಕೆ 14ನೇ ಲೇನ್‌ಗೆ ಆಗಮಿಸಿ, ಟೋಲ್ ಪಾವತಿಯಿಂದ ವಿನಾಯಿತಿ ನೀಡುವ ಹೈಕೋರ್ಟ್ ಆದೇಶ ತಮ್ಮ ಬಳಿ ಇದೆ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ.

ಆದರೆ, ಟೋಲ್ ಪಾವತಿಸುವಂತೆ ಸಿಬ್ಬಂದಿ ಒತ್ತಾಯಿಸಿದಾಗ, ಅಕ್ಷಯ್ ರೆಡ್ಡಿ ತಮ್ಮ ಬೈಕ್ ಅನ್ನು ಲೇನ್‌ಗೆ ಅಡ್ಡವಾಗಿ ನಿಲ್ಲಿಸಿ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಅಲ್ಲದೆ, ಇತರ ಬೈಕ್ ಸವಾರರು ಟೋಲ್ ಪಾವತಿಸದಂತೆ ಮನವಿ ಮಾಡಲಾರಂಭಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಭದ್ರತಾ ಅಧಿಕಾರಿ ರಂಗನಾಥ್ ಅವರು ಇತರ ವಾಹನ ಸವಾರರಂತೆ ಟೋಲ್ ಪಾವತಿಸುವಂತೆ ಅಕ್ಷಯ್ ರೆಡ್ಡಿಗೆ ಸೂಚಿಸಿದಾಗ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ,

ಟೋಲ್ ಪಾವತಿಸಲು ನಿರಾಕರಿಸಿದ ಅವರು, ಇತರ ಸವಾರರೂ ಟೋಲ್ ಕಟ್ಟಬಾರದು ಎಂದು ಮನವೊಲಿಸಲು ಮುಂದುವರಿದಿದ್ದರು ಎನ್ನಲಾಗಿದೆ.

AI Image
ಬೆಂಗಳೂರು ವಾಹನ ಸವಾರರ ಜೇಬಿಗೆ ಕತ್ತರಿ: ಇಂದಿನಿಂದ ನೈಸ್ ರಸ್ತೆ- ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್ ದರ ಏರಿಕೆ; ಹೊಸ ಶುಲ್ಕದ ಡಿಟೇಲ್ಸ್ ಇಲ್ಲಿದೆ!

ಬಳಿಕ ರಂಗನಾಥ್ ಅವರು ಅಕ್ಷಯ್ ಅವರನ್ನು ಲೇನ್‌ನಿಂದ ಕೆಲವು ಮೀಟರ್ ದೂರಕ್ಕೆ ಕರೆದೊಯ್ದು, ಇತರ ಸವಾರರನ್ನು ಪ್ರಚೋದಿಸುವ ಪ್ರಯತ್ನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳಿಕ ಅಕ್ಷಯ್ ರೆಡ್ಡಿ ಟೋಲ್ ಸಿಬ್ಬಂದಿಯನ್ನು ನಿಂದಿಸಿ, ಅವರು ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ.

ಬಳಿಕ ಹೊಯ್ಸಳ ಪೊಲೀಸರ ತಂಡ ಸ್ಥಳಕ್ಕೆ ಬಂದ ನಂತರ ಅಕ್ಷಯ್ ಟೋಲ್ ಪ್ಲಾಜಾದಿಂದ ತೆರಳಿದ್ದು, ಸಿಬ್ಬಂದಿಗೆ ಬೆದರಿಕೆ ಹಾಕುತ್ತಾ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಟೋಲ್ ಪ್ಲಾಜಾದಿಂದ ತೆರಳುವವರೆಗೂ ಅವರು ತಮ್ಮ ಮೊಬೈಲ್‌ನಲ್ಲಿ ಘಟನೆಯ ದೃಶ್ಯಗಳನ್ನು ದಾಖಲಿಸಿಕೊಂಡಿದ್ದರು ಎಂದು ದೂರುದಾರರು ಹೇಳಿದ್ದಾರೆ.

ಅಕ್ಷಯ್ ರೆಡ್ಡಿ ಯಮಹಾ ಸ್ಪೋರ್ಟ್ಸ್ ಬೈಕ್‌ನಲ್ಲಿ ಬಂದಿದ್ದರು. ಆರಂಭದಲ್ಲಿ ಜಾಮೀನು ರಹಿತವಲ್ಲದ ಪ್ರಕರಣದ ವರದಿ ದಾಖಲಿಸಲಾಗಿತ್ತು. ಶನಿವಾರ ಅದನ್ನು ಎಫ್‌ಐಆರ್ ಆಗಿ ಪರಿವರ್ತಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅಕ್ಷಯ್ ರೆಡ್ಡಿಗೆ ನೋಟಿಸ್ ನೀಡಲಾಗಿದೆ. ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಳ್ಳಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಷಯ್ ರೆಡ್ಡಿ ವಿರುದ್ಧ ಕ್ರಿಮಿನಲ್ ಬೆದರಿಕೆ ಹಾಗೂ ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com