ಸರ್ಕಾರಿ ನೌಕರರಿಗೆ ಹೈಕೋರ್ಟ್ ಶಾಕ್! ಅನುಕಂಪದ ನೌಕರಿ ಕೇವಲ ಒಮ್ಮೆಗೆ ಮಾತ್ರ: ಉನ್ನತ ಹುದ್ದೆ ಕೇಳುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು!

ಅನುಕಂಪದ ಆಧಾರದ ಮೇಲಿನ ನೇಮಕಾತಿಯು ಕೇವಲ ಒಂದು ಬಾರಿಯ ಕ್ರಮವಾಗಿದ್ದು, ಉನ್ನತ ಶೈಕ್ಷಣಿಕ ಅರ್ಹತೆ ಮುಂದಿಟ್ಟು ನಿರಂತರವಾಗಿ ಹೆಚ್ಚಿನ ಸೌಲಭ್ಯ ಅಥವಾ ಉನ್ನತ ಹುದ್ದೆಗಳನ್ನು ಕೇಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
Karnataka HC
ಕರ್ನಾಟಕ ಹೈಕೋರ್ಟ್Online Desk
Updated on: 

ಬೆಂಗಳೂರು: ಅನುಕಂಪದ ಆಧಾರದ ಮೇಲಿನ ನೇಮಕಾತಿಯು ಕೇವಲ ಒಂದು ಬಾರಿಯ ಕ್ರಮವಾಗಿದ್ದು, ಉನ್ನತ ಶೈಕ್ಷಣಿಕ ಅರ್ಹತೆ ಮುಂದಿಟ್ಟು ನಿರಂತರವಾಗಿ ಹೆಚ್ಚಿನ ಸೌಲಭ್ಯ ಅಥವಾ ಉನ್ನತ ಹುದ್ದೆಗಳನ್ನು ಕೇಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದ ಇಬ್ಬರು ನೌಕರರನ್ನು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಬೆಳಗಾವಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ನೌಕರರು ನಿಧನರಾದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಸದಸ್ಯರಿಗೆ 2018ರಲ್ಲಿ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಾತಿ ನೀಡಲಾಗಿತ್ತು. ಆದರೆ, ತಾವು ಉನ್ನತ ಶೈಕ್ಷಣಿಕ ಅರ್ಹತೆ (ಒಬ್ಬರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ) ಹೊಂದಿರುವುದರಿಂದ ತಮಗೆ FDA ಹುದ್ದೆ ನೀಡಬೇಕು ಎಂದು ಕೋರಿ ಅವರು KAT ಮೆಟ್ಟಿಲೇರಿದ್ದರು. KAT ಇವರ ಪರವಾಗಿ ಆದೇಶ ಎಫ್‌ಡಿಎ ಹುದ್ದೆ ನೀಡಲು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಒಂದು ಬಾರಿಯ ಪರಿಹಾರ

ಅದರಂತೆ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು, ಸರ್ಕಾರಿ ನೌಕರನ ಹಠಾತ್ ನಿಧನದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಕುಟುಂಬಕ್ಕೆ ತಕ್ಷಣದ ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶ. ಒಮ್ಮೆ ಈ ಸೌಲಭ್ಯದಡಿ ಕೆಲಸ ಪಡೆದ ನಂತರ, ಅನುಕಂಪದ ಹರಿವು ನಿರಂತರವಾಗಿ ಹರಿಯಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಈ ಆದೇಶ ಪ್ರಕಟಿಸಿದೆ.

Karnataka HC
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಹೊಸ ಪಟ್ಟಿ ಸಿದ್ಧಪಡಿಸಿ: ಹೈಕೋರ್ಟ್

ಮುಂದುವರೆದು, ಉನ್ನತ ಶೈಕ್ಷಣಿಕ ಅರ್ಹತೆಯು ಕೇವಲ ಒಂದು ಹುದ್ದೆಗೆ ಅರ್ಹತೆಯನ್ನು ನೀಡಬಹುದೇ ಹೊರತು, ಅನುಕಂಪದ ಯೋಜನೆಯಡಿಯೇ ಆ ಉನ್ನತ ಹುದ್ದೆಯನ್ನು ಪಡೆಯಬೇಕು ಎಂಬ ಕಾನೂನಾತ್ಮಕ ಹಕ್ಕನ್ನು ಸೃಷ್ಟಿಸುವುದಿಲ್ಲ. ಹಾಗಾಗಿ, ಇಂತಹ ಪ್ರಕರಣಗಳಲ್ಲಿ ಸರ್ಕಾರವು ವ್ಯಕ್ತಿಗಳನ್ನು ಪಿಕ್ ಆ್ಯಂಡ್ ಚೂಸ್ (ಆಯ್ಕೆ) ಮಾಡಬಾರದು. ನಿಯಮಬಾಹಿರವಾಗಿ ಯಾರಿಗಾದರೂ ಈ ಹಿಂದೆ ಸೌಲಭ್ಯ ನೀಡಿದ್ದರೆ, ಅದನ್ನೇ ಮುನ್ನೋಟವಾಗಿ ಬಳಸಿಕೊಂಡು ಮತ್ತೊಂದು ಕಾನೂನುಬಾಹಿರ ಕ್ರಮಕ್ಕೆ ಹಕ್ಕು ಸ್ಥಾಪಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಏತನ್ಮಧ್ಯೆ, ಈ ಹಿಂದೆ ಬೇರೆಯವರಿಗೆ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಹುದ್ದೆ ಬದಲಾಯಿಸಿಕೊಡಲಾಗಿದೆ ಎಂಬ ಕಾರಣಕ್ಕೆ ತಮಗೂ ಅದನ್ನೇ ಅನ್ವಯಿಸಬೇಕು ಎಂದು ಕೇಳಲಾಗದು. ನಿಯಮಬಾಹಿರವಾಗಿ ನೀಡಲಾದ ಯಾವುದೇ ಪ್ರಯೋಜನಗಳು ಮತ್ತೊಂದು ಕಾನೂನುಬಾಹಿರ ಕ್ರಮಕ್ಕೆ ಹಕ್ಕನ್ನು ಸೃಷ್ಟಿಸುವುದಿಲ್ಲ ಮತ್ತು ಇದು ಆಡಳಿತಾತ್ಮಕ ಶಿಸ್ತನ್ನು ಕಡಿತಗೊಳಿಸುತ್ತದೆ ಎಂದು ಪೀಠ ಎಚ್ಚರಿಸಿದೆ. 

Karnataka HC
'ಸಲ್ವಾರ್ ತೆಗೆದು ಸ್ತನಗಳ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?': ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com