ವಿಜಯನಗರದಲ್ಲಿ ಮರಕ್ಕೆ ವಿಷ ತುಂಬಿಸಿದ ಘಟನೆ: ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ!

ಮರಕ್ಕೆ ವಿಷ ತುಂಬಿಸಿದ ಆರೋಪದ ಮೇಲೆ ಸ್ಥಳೀಯ ನಿವಾಸಿ ರಾಜೇಂದ್ರ ಕುಮಾರ್ ಹಾಗೂ ಅವರ ಸಹೋದರರಾದ ವಿನೇಂದ್ರ ಕುಮಾರ್ ಮತ್ತು ಜಿತೇಂದ್ರ ಕುಮಾರ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ
Holes drilled into the tree which once had a twin above, which was also killed
ಮರಕ್ಕೆ ಕೊರೆಯಲಾದ ರಂಧ್ರಗಳು
Updated on: 

ಬೆಂಗಳೂರು: ವಿಜಯನಗರದಲ್ಲಿ ಮರವೊಂದಕ್ಕೆ ರಂದ್ರ ಕೊರೆದು ವಿಷ ತುಂಬಿಸಿರುವ ಘಟನೆಯು ನಗರದಲ್ಲಿನ ಮರ, ಗಿಡಗಳ ಸುರಕ್ಷತೆಯ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಅಲ್ಲದೆ, ಕೆಂಗೇರಿ, ಇಂದಿರಾನಗರ, ಮಲ್ಲೇಶ್ವರಂ, ಜಯನಗರ ಮತ್ತು ಜೆಪಿ ನಗರ ಸೇರಿದಂತೆ ಬೆಂಗಳೂರಿನಾದ್ಯಂತ ಇಂತಹ ಚಟುವಟಿಕೆಗಳ ಬಗ್ಗೆ ಆತಂಕ ಹೆಚ್ಚುತ್ತಿದೆ.

ವಿಜಯನಗರದ 7ನೇ ಮುಖ್ಯ ರಸ್ತೆ ಮತ್ತು 3ನೇ ಅಡ್ಡ ರಸ್ತೆಯಲ್ಲಿದ್ದ ಮರವು ಈ ಘಟನೆಗೆ ತುತ್ತಾಗಿದೆ. ಮರಕ್ಕೆ ವಿಷ ತುಂಬಿಸಿದ ಆರೋಪದ ಮೇಲೆ ಸ್ಥಳೀಯ ನಿವಾಸಿ ರಾಜೇಂದ್ರ ಕುಮಾರ್ ಹಾಗೂ ಅವರ ಸಹೋದರರಾದ ವಿನೇಂದ್ರ ಕುಮಾರ್ ಮತ್ತು ಜಿತೇಂದ್ರ ಕುಮಾರ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅರಣ್ಯ ಸಂರಕ್ಷಣಾಧಿಕಾರಿ (DCF) ಸುದರ್ಶನ್ ಜಿ.ಕೆ. ತಿಳಿಸಿದ್ದಾರೆ.

'ಟೀಮ್ ಸೋಶಿಯಲ್ ಸ್ಪಾಟ್‌ಲೈಟ್'ನ (Team Social Spotlight) ಸ್ಥಾಪಕ ಸೋನೇಶ್ ಕೆ. ಶೆಟ್, ಆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮರದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿರುವುದನ್ನು ಗಮನಿಸಿದ್ದಾರೆ. ಎಲೆಗಳು ಉದುರುವ ಕಾಲವಲ್ಲದಿದ್ದರೂ ಹೀಗಾಗುತ್ತಿರುವುದನ್ನು ಕಂಡು ಆತಂಕಗೊಂಡ ಅವರು, ಮರವನ್ನು ಪರಿಶೀಲಿಸಿದಾಗ ಅದರ ಕಾಂಡಕ್ಕೆ ರಂಧ್ರ ಕೊರೆದು ವಿಷ ತುಂಬಿರುವುದು ಕಂಡುಬಂದಿದೆ.

ಈ ಹಿಂದೆ ಇದೇ ಸ್ಥಳದಲ್ಲಿದ್ದ ಮತ್ತೊಂದು ಮರವನ್ನು ಮೂರು ವರ್ಷಗಳ ಹಿಂದೆ ಇದೇ ರೀತಿಯ ವಿಧಾನವನ್ನು ಬಳಸಿ ನಾಶಪಡಿಸಲಾಗಿತ್ತು. ಇದೀಗ ಈ ಮರವನ್ನೂ ಅದೇ ರೀತಿಯಲ್ಲಿ ಮಾಡಲು ಪ್ರಯತ್ನಿಸಲಾಗಿದೆ ಎಂದು ಸೋನೇಶ್ ಹೇಳಿದರು. ಅವರು ಸೆಪ್ಟೆಂಬರ್ 11 ರಂದು ಈ ಘಟನೆಯ ಬಗ್ಗೆ ವಲಯ ಅರಣ್ಯಾಧಿಕಾರಿಗೆ (Range Forest Officer) ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಮರದ ಬೇರುಗಳನ್ನು ನೀರಿನಿಂದ ತೊಳೆದು, ಕೊರೆದ ರಂಧ್ರಗಳಿಂದ ವಿಷವನ್ನು ಹೊರಹಾಕಲಾಯಿತು. ನಂತರ, 'ಟ್ರೀ ಡಾಕ್ಟರ್' (ಮರಗಳ ವೈದ್ಯ) ಎಂದೇ ಖ್ಯಾತರಾದ ಪರಿಸರ ಸಂರಕ್ಷಣಾಕಾರ ವಿಜಯ್ ನಿಶಾಂತ್ ಆ ಮರಕ್ಕೆ ಚಿಕಿತ್ಸೆ ನೀಡಿದ್ದಾರೆ. ಬೆಂಗಳೂರಿನಾದ್ಯಂತ ಇಂತಹ ಸುಮಾರು 70-80 ಪ್ರಕರಣಗಳಲ್ಲಿ ನಾಶವಾಗುತ್ತಿದ್ದ ಮರಗಳನ್ನು ಉಳಿಸಿದ ಹೆಗ್ಗಳಿಕೆ ಅವರದ್ದಾಗಿದೆ.

Holes drilled into the tree which once had a twin above, which was also killed
ಲಾಲ್ ಬಾಗ್-ಕಬ್ಬನ್ ಪಾರ್ಕ್ ನ 22 ಎಕರೆ ಜಾಗ ಪರಭಾರೆ?; ಬೆಂಗಳೂರಿನ ಪಾರ್ಕ್‌ಗಳಿಗೆ ಹೊಸ ಕಾಯ್ದೆ ಕಂಟಕ?; ರಾಜ್ಯಪಾಲರಿಗೆ ಸಂಸದ Tejasvi Surya ಪತ್ರ; Video

ಮರವು ಈಗ ತುಸು ಉತ್ತಮ ಸ್ಥಿತಿಯಲ್ಲಿದ್ದು, ಅದು ಬದುಕುಳಿಯುವ ಸಾಧ್ಯತೆ ಶೇಕಡಾ 50 ರಷ್ಟಿದೆ. ಚೇತರಿಕೆಯು ಅಷ್ಟು ಸುಲಭವಲ್ಲ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಮರವು ಬೆಳೆಯುತ್ತದೆಯೇ ಇಲ್ಲವೇ ಎಂಬುದು ಮುಖ್ಯವಲ್ಲ, ಆದರೆ ಅದನ್ನು ಜೀವಂತವಾಗಿರಿಸುವುದು ಅತ್ಯಂತ ಮುಖ್ಯ ಎಂದು ನಿಶಾಂತ್ ಹೇಳಿದರು.

ಪ್ರಸ್ತುತ ಕಾನೂನು ವ್ಯವಸ್ಥೆಯಲ್ಲಿರುವ ಸಡಿಲವಾದ ಶಿಕ್ಷೆಗಳ ಬದಲಿಗೆ, ಮರಗಳಿಗೆ ಹಾನಿ ಮಾಡುವವರಿಗೆ ದೀರ್ಘಕಾಲದ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸುವಂತೆ 'ಮರಗಳ ಸಂರಕ್ಷಣಾ ಕಾಯ್ದೆ'ಯಲ್ಲಿ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ, ಸೋನೇಶ್ ಮತ್ತು ಮತ್ತಿತರರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com