ಟೆಂಡರ್ ಪ್ರಕ್ರಿಯೆಯಲ್ಲಿ ₹444 ಕೋಟಿ ಅಕ್ರಮ: ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಟೆಂಡರ್ ಪ್ರಕ್ರಿಯೆ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಆಗ ಸಿದ್ದರಾಮಯ್ಯ ಅವರು ತಮ್ಮ ಬಳಿಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ಉಳಿಸಿಕೊಂಡಿದ್ದರು.
Yatindra siddaramaiah
ಯತೀಂದ್ರ ಸಿದ್ಧರಾಮಯ್ಯ
Updated on: 

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಡಿಯಲ್ಲಿನ KSDC ಹಾಗೂ KSWANನಲ್ಲಿ ₹444 ಕೋಟಿ ಹಗರಣದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ಕೆ ದೂರು ಸಲ್ಲಿಕೆಯಾಗಿದೆ.

ಯತೀಂದ್ರ ಜೊತೆಗೆ IAS ಅಧಿಕಾರಿ ಭೂಬಾಲನ್ ವಿರುದ್ಧವೂ ದಾಖಲೆ ಸಮೇತ ಬಿಜೆಪಿ ಮುಖಂಡ ಎನ್ ಆರ್ ರಮೇಶ್​ ದೂರು ನೀಡಿದ್ದಾರೆ. 2025ರಲ್ಲಿ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ. ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ನೀಡಿದ್ದಾರೆ ಎಂದು ದೂರಲಾಗಿದೆ. ಸಚಿವ ಯತೀಂದ್ರ, ಅಧಿಕಾರಿಗಳ‌ ವಿರುದ್ಧ ತನಿಖೆಗೆ ರಮೇಶ್ ಆಗ್ರಹಿಸಿದ್ದಾರೆ.

ಟೆಂಡರ್ ಪ್ರಕ್ರಿಯೆ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಆಗ ಸಿದ್ದರಾಮಯ್ಯ ಅವರು ತಮ್ಮ ಬಳಿಯೇ DPAR ಇಲಾಖೆಯನ್ನು ಉಳಿಸಿಕೊಂಡಿದ್ದರು. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಅಣತಿ ಮೇರೆಗೆ ಟೆಂಡರ್ ನೀಡಿದ ಆರೋಪ ಕೇಳಿಬಂದಿದೆ.

Yatindra siddaramaiah
ಸಿದ್ದರಾಮಯ್ಯ ಮನೆ ಗೃಹಪ್ರವೇಶ: ಪತ್ನಿಯಿಂದ ಗೋ ಪೂಜೆ, ಲಕ್ಷ್ಮಿ ಫೋಟೊ ಹಿಡಿದು ನಿಂತ ಯತೀಂದ್ರ; ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ

ಅರ್ಹತೆಯೇ ಇಲ್ಲದ ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿದೆ. ಇ-ಆಡಳಿತ ವಿಭಾಗದ ಸಿಇಒ ಅಧಿಕಾರಿ ಭೂಬಾಲನ್ ಸೇರಿದಂತೆ ಮೂವರು ಅಧಿಕಾರಿಗಳ‌ ವಿರುದ್ಧವೂ ದೂರು ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com