ಬೆಂಗಳೂರು: ವಿದ್ಯಾರ್ಥಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ; ಬಿಕಾಂ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಸಹಪಾಠಿ!

ಕೊಲೆಯಾದ ವಿದ್ಯಾರ್ಥಿಯನ್ನು ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಯೋಗೀಶ್(19) ಎಂದು ಗುರುತಿಸಲಾಗಿದೆ.
 College Student Stabbed to Death In Bengaluru
ಯೋಗೀಶ್
Updated on: 

ಬೆಂಗಳೂರು: ರಾಜಧಾನಿ ಬೆಂಗಳೂರಿನ ದೀಪಾ ಕಾಂಪ್ಲೆಕ್ಸ್ ಬಳಿ ಕಾಲೇಜ್ ವಿದ್ಯಾರ್ಥಿಗಳ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬುಧವಾರ ನಡೆದಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ವಿದ್ಯಾರ್ಥಿಯನ್ನು ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಯೋಗೀಶ್(19) ಎಂದು ಗುರುತಿಸಲಾಗಿದೆ.

ಯೋಗೀಶ್ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಜೊತೆಗೆ ಉತ್ತಮ ಡಾನ್ಸರ್ ಕೂಡ ಆಗಿದ್ದ.

ಇಂದು ಎಂದಿನಂತೆ ಯೋಗೀಶ್ ಕಾಲೇಜಿಗೆ ಬಂದಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಯೋಗೀಶ್‌ಗೆ ಫೋನ್ ಮಾಡಿ, ಹೊರಗೆ ಬಂದು ಮಾತನಾಡುವಂತೆ ಹೇಳಿದ್ದಾನೆ.

 College Student Stabbed to Death In Bengaluru
ಉಡುಪಿ: ಗರ್ಭಿಣಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಯತ್ನ; ಹೆಂಡ್ತಿ ಬದುಕುಳಿಯುತ್ತಿದ್ದಂತೆ ಪ್ರೇಯಸಿ ಜತೆ ಪತಿ ಆತ್ಮಹತ್ಯೆ!

ಕಾಲೇಜಿನ ಹಿಂಭಾಗದಲ್ಲಿರುವ ಜಿಮ್‌ವೊಂದರ ಬಳಿ ಯೋಗೀಶ್ ಬಂದಿದ್ದಾನೆ. ಅಲ್ಲಿ ಆತನೊಂದಿಗೆ ಮಾತನಾಡಲು ಏಳೆಂಟು ಮಂದಿ ಬಂದಿದ್ದರು. ಇದೇ ವೇಳೆ ಯೋಗೀಶ್ ಸ್ನೇಹಿತರು ಹಾಗೂ ಮತ್ತೊಂದು ಗುಂಪಿನ ನಡುವೆ ಯಾವುದೋ ವಿಚಾರಕ್ಕೆ ಏಕಾಏಕಿ ಗಲಾಟೆ ನಡೆದಿದೆ.

ಗಲಾಟೆ ನಡೆಯುತ್ತಿದ್ದ ವೇಳೆ ಗುಂಪಿನಲ್ಲಿದ್ದ ಓರ್ವ ವಿದ್ಯಾರ್ಥಿ ಏಕಾಏಕಿ ಚಾಕು ತೆಗೆದು ಯೋಗೀಶ್‌ನ ಎದೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯೋಗೀಶ್‌ನನ್ನು ಸ್ನೇಹಿತರು ಬೈಕ್‌ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ

ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೀಶ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com