ಈಗಿನ ಸುದ್ದಿ

'ಬಿಎಸ್ಪಿ ಮುಖಂಡನ ಹತ್ಯೆಗೆ 2 ಕೋಟಿ ರು.ಸುಪಾರಿ'

'ಬಿಎಸ್ಪಿ ಮುಖಂಡನ ಹತ್ಯೆಗೆ 2 ಕೋಟಿ ರು.ಸುಪಾರಿ'
Published On :

ನವದೆಹಲಿ: ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥ ಹಾಗೂ ಉದ್ಯಮಿ ದೀಪಕ್ ಭಾರದ್ವಾಜ್ ಹತ್ಯೆಗೆ 2 ಕೋಟಿ ರುಪಾಯಿ ಸುಪಾರಿ ನೀಡಲಾಗಿದೆ ಎಂಬ ಸಂಗತಿ ಮಂಗಳವಾರ ಬಹಿರಂಗವಾಗಿದೆ.

ದೀಪಕ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಪ್ರಮುಖ ಆರೋಪಿಗಳಾದ ಪುರುಷೋತ್ತಮ್ ರಾಣಾ ಹಾಗೂ ಸುನಿಲ್ ಮನ್ ಎರಡು ಕೋಟಿ ರುಪಾಯಿ ಸುಪಾರಿ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಮಧ್ಯೆ, ಪ್ರಕರಣದ ನಾಲ್ಕು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಈ ಮೂವರನ್ನು ಇಂದು ಪಟಿಯಾಲ ಕೋರ್ಟ್ಗೆ ಹಾಜರುಪಡಿಸಲಾಗುತ್ತಿದೆ. ಪೊಲೀಸರು ರಾಣಾ, ಸುನಿಲ್ ಹಾಗೂ ಹತ್ಯೆಗೆ ಬಳಸಲಾದ ಸ್ಕೋಡಾ ಕಾರ್ ಚಾಲಕ ಅಮಿತ್ನನ್ನು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಇದೆ.

ದೀಪ್ ಅವರ ಪತ್ನಿ ರಮೇಶ್ ಕುಮಾರಿ ಹಾಗೂ ಅವರ ಹಿರಿಯ ಪುತ್ರ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಆ ಇಬ್ಬರನ್ನು ದೆಹಲಿ ಪೊಲೀಸರು ನಿನ್ನೆ ರಾತ್ರಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗಂಡ-ಹೆಂಡತಿ ಮಧ್ಯೆ ಕಲಹ ಉಂಟಾಗಿ, ದೀಪಕ್ ಅವರನ್ನು ತೊರೆದು ಪತ್ನಿ ಕಳೆದ ಹಲವು ತಿಂಗಳಿನಿಂದ  ಮಗ ನಿತೀಶ್ ಎಂಬುವವರ ಮನೆಯಲ್ಲಿ ವಾಸವಿದ್ದರು. ಇದಲ್ಲದೇ ಮಗ ನಿತೀಶ್ ತಂದೆಯ ವಿರುದ್ಧ ಕೆಲವು ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೀಪಕ್ ಅವರು ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಪತ್ನಿ ಮತ್ತು ಮಗನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವಾರ ನಿತೇಶ್ ಕುಂಜ್ ಫಾರ್ಮ್‌ಹೌಸ್‌ನಲ್ಲಿ 62 ವರ್ಷದ ಬಿಎಸ್‌ಪಿ ನಾಯಕ ದೀಪಕ್ ಭಾರದ್ವಜ್ ಅವರನ್ನು ಅಪರಿಚಿತ ವ್ಯಕ್ತಿಗಳು ಶೂಟ್ ಮಾಡಿ ಪರಾರಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.