ಅಗ್ನಿ ಪ್ರವೇಶಕ್ಕೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದ ಸ್ವಾಮಿಗಳು

ಬೆಂಗಳೂರು: ಬೀದರ್ನ ಚೌಳಿ ಮಠದಲ್ಲಿ ನಿನ್ನೆ ಅಗ್ನಿ ಸಮಾಧಿಯಾದ ಮೂವರು ಕಿರಿಯ ಸ್ವಾಮಿಗಳ ಪ್ರಕರಣ ಮಂಗಳವಾರ ಹೊಸ ತಿರುವು ಪಡೆದುಕೊಂಡಿದ್ದು, ಅಗ್ನಿ ಪ್ರವೇಶ ಮಾಡುವ ಮುನ್ನ ಮೂವರು ಶ್ರೀಗಳು ವಿಡಿಯೋ ರೆಕಾರ್ಡ್ ಮಾಡಿದ್ದು, ಆ ವಿಡಿಯೋ ಇಂದು ತಪಾಸಣೆ ವೇಳೆ ಪತ್ತೆಯಾಗಿದೆ. ಅದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಾಗಿದೆ.
ಸ್ವಾಮಿಗಳು ಸಾವಿನ ನಂತರ ಪತ್ತೆಯಾದ ಡೆತ್ನೋಟ್ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಇದೀಗ ಪತ್ತೆಯಾದ 15 ನಿಮಿಷಗಳ ವಿಡಿಯೋ ಸಹ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆ ವಿಡಿಯೋವನ್ನು ರೆಕಾರ್ಡ್ ಮಾಡಿವರು ಯಾರು? ಆ ವಿಡಿಯೋ ಪೊಲೀಸರಿಗೆ ಲಭ್ಯವಾಗುವಂತೆ ಮಾಡಿದವರು ಯಾರು ಎಂಬ ಪ್ರಶ್ನೆ ಸಾರ್ವಜನಕರನ್ನು ಕಾಡುತ್ತಿದೆ.
ಸಾವಿಗು ಮುನ್ನ ವಿಡಿಯೋದಲ್ಲಿ ಸ್ವಾಮಿಗಳ ಮಾತು...
ಗುರುವಿಗಾಗಿ ನಾವು ಹಂಬಲಿಸಿದ್ದೇವೆ.. ಇಂದು ಕಾಣಿಸುತ್ತಾನೋ ನಾಳೆ ಕಾಣಿಸುತ್ತಾನೋ ಎಂದು ಹಂಬಲಿಸಿದ್ದೇವೆ.
ಗುರುವನ್ನು ಕಾತರಿಸಿ ನಾವು ಹೊರಟ್ಟಿದ್ದೇವೆ.
ಓಂ ನಮಃ ಶಿವಾಯ, ಓಂ ನಮಃ ಶಿವಾಯ ನಾಮ ಜಪಿಸುತ್ತಾ ಹೊರಟ್ಟಿದ್ದೇವೆ ಎಂದು ವಿಡಿಯೋದಲ್ಲಿ ಜಗನ್ನಾಥ ಸ್ವಾಮಿ ತಮ್ಮ ಕೊನೆಯ ಮಾತು ಹೇಳಿದ್ದಾರೆ.
ಇನ್ನು ಒಂದು ತಿಂಗಳೊಳಗಾಗಿ ಬರುವಂತೆ ಗುರುಗಳು ಆಜ್ಞೆ ಮಾಡಿದ್ದಾರೆ. ಅವರ ಆಜ್ಞೆ ಮೇರೆಗೆ ನಾವು ಸ್ವ ಇಚ್ಛೆಯಿಂದ ಅಗ್ನಿ ಪ್ರವೇಶ ಮಾಡುತ್ತಿದ್ದೇವೆ. ಯಾರಿಗೆ ಇಚ್ಛೆ ಇದೆ ಅವರು ಬನ್ನಿ ಎಂದು ಎಲ್ಲ ಸಾಧಕರಿಗೆ ಗುರುಗಳು ಆಜ್ಞೆ ಮಾಡಿದ್ದಾರೆ. ಯಾವ ಸಾಧಕರು ಬರುತ್ತಾರೋ ಎಂದು ಹಾದಿ ನೋಡಿದ್ದೇವೆ. ಆದರೆ ಯಾರು ಬಂದಿಲ್ಲ. ಆದ್ದರಿಂದ ನಾವು ನಮ್ಮ ಇಚ್ಛೆಯಿಂದ ಗುರುದೇವರಲ್ಲಿ ಒಂದಾಗುತ್ತಿದ್ದೇವೆ ಎಂದು 18 ವರ್ಷದ ಪ್ರಣವ್ ವಿಡಿಯೋದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


