ಈಗಿನ ಸುದ್ದಿ

'ಕೈ' ಪ್ರಣಾಳಿಕೆ: 'ದಕ್ಷ ಆಡಳಿತ, ಸಮರ್ಥ ನಾಯಕ' ಬಿಡುಗಡೆ

'ಕೈ' ಪ್ರಣಾಳಿಕೆ: 'ದಕ್ಷ ಆಡಳಿತ, ಸಮರ್ಥ ನಾಯಕ' ಬಿಡುಗಡೆ
Published On :

ಬೆಂಗಳೂರು: ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಬುಧವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಬಾರಿ ಅಧಿಕಾರ 'ಕೈ'ವಶ ಮಾಡಿಕೊಳ್ಳಲು ಹಲವು ಜನಪ್ರಿಯ ಮತ್ತು ಜನಪರ ಕಾರ್ಯಕ್ರಮಗಳ ಭರವಸೆ ನೀಡಿದೆ.

ಬಿಪಿಎಲ್ ಕಾರ್ಡ್ದಾರರಿಗೆ 1 ರುಪಾಯಿಗೆ ಕೆಜಿಯಂತೆ ಪ್ರತಿ ತಿಂಗಳಿಗೆ 30 ಕೆಜಿ ಅಕ್ಕಿ ವಿತರಿಸುವುದು. ರೈತರ ಪಂಪ್ಸೆಟ್ಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ, ಎರಡು ಲಕ್ಷ ರುಪಾಯಿ ವರೆಗಿನ ಕೃಷಿ ಸಾಲಕ್ಕೆ ಬಡ್ಡಿ ವಿನಾಯಿತಿ, ಶೇ.3ರ ಬಡ್ಡಿ ದರದಲ್ಲಿ ಐದು ಲಕ್ಷ ರುಪಾಯಿ ವರೆಗೆ ಸಾಲ ಸೇರಿದಂತೆ ಹಲವು ಭರವಸೆಗಳ 'ದಕ್ಷ ಆಡಳಿತ, ಸಮರ್ಥ ನಾಯಕ' ಎಂಬ ಹೆಸರಿನ ಕೈ ಪ್ರಣಾಳಿಕೆಯನ್ನು ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಬಿಡುಗಡೆ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಧಸೂದನ್ ಮಿಸ್ತ್ರಿ, ಅಂಬಿಕಾ ಸೋನಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಆದರೆ ಕೇಂದ್ರ ಮಾಜಿ ಎಸ್.ಎಂ ಕೃಷ್ಣ ಮಾತ್ರ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಗೈರು ಆಗಿದ್ದರು.

ಪ್ರಣಾಳಿಕೆಯ ಪ್ರಮುಖ ಅಂಶಗಳು:

  • ಪ್ರತಿ ಜಿಲ್ಲೆಯಲ್ಲೂ, ಮಹಿಳಾ ಹಾಗೂ ವೈದ್ಯಕೀಯ ಕಾಲೇಜ್ ಸ್ಥಾಪನೆ
  • ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
  • ಪ್ರತಿ ಜಿಲ್ಲೆಗೆ ನಾಲ್ಕು ಪಥದ ರಸ್ತೆ
  • ಬೆಂಗಳೂರಿನಲ್ಲಿ ಕ್ರೀಡಾ ಸಮುಚ್ಛಯ, ಸಸ್ಯ ಕಾಶಿ ಉದ್ಯಾನವನ ನಿರ್ಮಾಣ
  • ಬೆಂಗಳೂರಿನ 5 ಭಾಗಗಳಲ್ಲಿ ವಿಭಜಿತ ಕಲಾ ಮಂದಿರ ನಿರ್ಮಾಣ
  • ಬೆಂಗಳೂರು ನಗರಕ್ಕೆ ವಿಶೇಷ ಕಾನೂನು
  • ಬಿಬಿಎಂಪಿ ಆಡಳಿತ ವ್ಯವಸ್ಥೆಯ ವಿಕೇಂದ್ರಕರಣ ಯೋಜನೆ
  • 7ನೇ ತರಗತಿವರೆಗೆ ಕನ್ನಡ ಕಡ್ಡಾಯ
  • ಹಾಲು ಉತ್ಪಾದಕರಿಗೆ 2ರು.ನಿಂದ 4.ರು.ವರೆಗೆ ಪ್ರೋತ್ಸಾಹ ಧನ
  • ಹನಿ ನೀರಾವರಿಗೆ ಶೇ.100ರಷ್ಟು ಪ್ರೋತ್ಸಾಹ ಧನ
  • ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ನೋಟ್‌ಬುಕ್ ವಿತರಣೆ
  • ಮೀನುಗಾರ ಮಹಿಳೆಯರಿಗೆ 1 ಲಕ್ಷ ರುಪಾಯಿ ಸಾಲ
  • ಎರಡು ವರ್ಷದಲ್ಲಿ ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ
  • ಗುಡಿಸಲು ರಹಿತ ಕರ್ನಾಟಕ ನಿರ್ಮಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.