ಹಿಂದಿ 'ವಿಶ್ವರೂಪಂ'ಗೆ ಉತ್ತಮ ಪ್ರತಿಕ್ರಿಯೆ: ಕಮಲ್ ದಿಲ್‌ಖುಷ್

ಚೆನ್ನೈ: ಉತ್ತರ ಭಾರತದಾದ್ಯಂತ ಶುಕ್ರವಾರ 1000 ಚಿತ್ರ ಮಂದಿರಗಳಲ್ಲಿ ತರೆಕಂಡ 'ವಿಶ್ವರೂಪಂ'ನ ಹಿಂದಿ ಆವೃತ್ತಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗ ಚಿತ್ರದ ನಟ, ನಿರ್ದೇಶಕ ಕಮಲಹಾಸನ್ ಅವರು ಖುಷಿ ಮೂಡ್‌ನಲ್ಲಿದ್ದಾರೆ.
ಈ ಬಗ್ಗೆ ಶನಿವಾರ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಕಮಲ್, ಉತ್ತರ ಭಾರತದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಚಿತ್ರದ ಪ್ರಚಾರಾರ್ಥವಾಗಿ ಜನವರಿ 31ರಿಂದ ಮುಂಬೈಯಲ್ಲಿದ್ದ ಕಮಲ್ ಇಂದು ಚೆನ್ನೈಗೆ ಆಗಮಿಸಿದ್ದು, ತಮಿಳು ನಾಡಿನಲ್ಲಿ ವಿಶ್ವರೂಪಂ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಂಬಂಧ ಮುಸ್ಲಿಂ ಸಂಘಟನೆಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ನಿನ್ನೆಯಷ್ಟೇ ಕಮಲ್ ಅವರ ಸಹೋದರ ಚಂದ್ರಹಾಸನ್ ಅವರು, ರಾಜ್ಯ ಗೃಹ ಕಾರ್ಯದರ್ಶಿ ಆರ್ ರಾಜಗೋಪಾಲ್ ಅವರ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಮುಸ್ಲಿಂ ಸಂಘಟನೆಗಳ ಮುಖಂಡರು ವಿವಾದಿತ 9 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಸ್ವತಃ ಕಮಲಹಾಸನ್ ಅವರೊಂದಿಗೆ ವಿವಾದದ ಕುರಿತು ಮಾತುಕತೆ ನಡೆಸುವ ಅಭಿಪ್ರಾಯ ವ್ಯಕ್ತಪಡಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


