ನಾಳೆ ಕಾವೇರಿ ನ್ಯಾಯಾಧೀಕರಣದ ಐ ತೀರ್ಪು ಪ್ರಕಟ

ನವದೆಹಲಿ: ಕರ್ನಾಟಕ ಸರ್ಕಾರದ ಸತತ ವಿರೋಧದ ನಡುವೆಯೇ, ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ ನಾಳೆಯೇ ಕಾವೇರಿ ನ್ಯಾಯಾಧೀಕರಣದ ಅಂತಿಮ ಐ ತೀರ್ಪಿನ ಅಧಿಸೂಚನೆ ಹೊರಡಿಸಲಿದೆ.
ಫೆಬ್ರವರಿ 20ರೊಳಗೆ ಐ ತೀರ್ಪಿನ ಅಧಿಸೂಚನೆ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಇಂದು ಪ್ರಕಟಣೆಗೆ ಕಳಿಸಿದ್ದು, ನಾಳೆ ಐ ತೀರ್ಪಿನ ಅಧಿಸೂಚನೆ ಗೆಜೆಟ್ನಲ್ಲಿ ಪ್ರಕಟವಾಗಲಿದೆ.
ಅಧಿಸೂಚನೆ ಹೊರಡಿಸುವುದನ್ನು ತಡೆಯುವ ಕೊನೆಯ ಪ್ರಯತ್ನವಾಗಿ ನಿನ್ನೆಯಷ್ಟೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉಭಯ ಸದನಗಳ ನಾಯಕರನ್ನೊಳಗೊಂಡ ನಿಯೋಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಆದರೆ ರಾಜ್ಯ ಸರ್ಕಾರದ ಕೊನೆಯ ಪ್ರಯತ್ನವೂ ವಿಫಲವಾಗಿದೆ.
ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸದಂತೆ ಪ್ರಧಾನಿಯವರನ್ನು ಕೋರಲು ಸೋಮವಾರ ಆಗಮಿಸಿದ್ದ ಶೆಟ್ಟರ್ ನಿಯೋಗ, ಐತೀರ್ಪಿನ ಅಧಿಸೂಚನೆ ಪ್ರಕಟಣಾನಂತರ ಉದ್ಭವಿಸುವ ಪರಿಣಾಮಗಳಿಗೆ ಪರಿಹಾರೋಪಾಯಗಳನ್ನು ಮುಂದಿಟ್ಟಿದೆ.
ಪ್ರಧಾನಿಗೆ ಮಾಡಿರುವ ಮನವಿಯಲ್ಲಿ ಕಾವೇರಿ ಜಲಾನಯನ ನಿರ್ವಹಣಾ ಮಂಡಳಿ ರಚನೆ ಬೇಡ. ಬದಲಿಗೆ, ಈಗಿರುವಂತೆ ಕಾವೇರಿ ನದಿ ಪ್ರಾಧಿಕಾರ(ಸಿಆರ್ಎ) ಮತ್ತು ಕಾವೇರಿ ನಿಗಾ ಸಮಿತಿ(ಸಿಎಂಸಿ) ಮುಂದುವರೆಯುವಂತೆ ಮನವಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


