ಈಗಿನ ಸುದ್ದಿ

ಪ್ರಭಾಕರನ್ ಪುತ್ರನನ್ನು ಸೇನೆ ಹತ್ಯೆ ಮಾಡಿಲ್ಲ; ಶ್ರೀಲಂಕಾ

Published On :

ಶ್ರೀಲಂಕಾ: ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರ 12ರ ಹರೆಯದ ಪುತ್ರನನ್ನು ಶ್ರೀಲಂಕಾ ಸೇನೆ ಹತ್ಯೆ ಮಾಡಿಲ್ಲ. ಬ್ರಿಟಿಷ್ ವಾಹಿನಿಯೊಂದು ಈ ಬಗ್ಗೆ ಮಾಡಿದ ಸಾಕ್ಷ್ಯಚಿತ್ರ ಸತ್ಯಕ್ಕೆ ದೂರವಾದುದು ಎಂದು ಶ್ರೀಲಂಕಾ ಸರ್ಕಾರ ಹೇಳಿದೆ.

ಪ್ರಭಾಕರನ್‌ರ ಪುತ್ರನ ಸಾವಿನ ಮುನ್ನ ಹಾಗು ಸಾವಿನ ನಂತರದ ಫೋಟೋ ಬಳಸಿ ತಯಾರಿಸಿದ ಸಾಕ್ಷ್ಯಚಿತ್ರ ಪ್ರದರ್ಶಿಸಿದ ವಾಹಿನಿ ವಿರುದ್ಧ ಕಿಡಿ ಕಾರಿದ ಶ್ರೀಲಂಕಾ ಸರ್ಕಾರ, ಇದೆಲ್ಲವೂ ಸುಳ್ಳಿನ ಕಂತೆ ಎಂದು ಗುಡುಗಿದೆ.

ದ ಚಾನೆಲ್ 4 ಎಂಬ ವಾಹಿನಿಯು 'No War Zone?  ಎಂಬ ಸಾಕ್ಷ್ಯಚಿತ್ರದಲ್ಲಿ ಶ್ರೀಲಂಕಾದಲ್ಲಿ ಎಲ್‌ಟಿಟಿಇ ಮತ್ತು ಲಂಕಾ ಪಡೆ ನಡುವಿನ ಯುದ್ಧವನ್ನು ಸೆರೆಹಿಡಿಯಲಾಗಿದೆ. ಅದರಲ್ಲಿ ಪ್ರಭಾಕರನ್‌ರ ಪುತ್ರನನ್ನು ಲಂಕಾ ಸೇನೆ ಬಂಧನಕ್ಕೊಳಪಡಿಸಿ ನಂತರ ಆತನನ್ನು ಸೇನೆ ಹತ್ಯೆಗೈದಿದೆ ಎಂದು ತೋರಿಸಲಾಗಿತ್ತು. ಈ ಸಾಕ್ಷ್ಯಚಿತ್ರವನ್ನು ಮಾರ್ಚ್‌ನಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿಯ ಮುಂದೆ ಪ್ರದರ್ಶಿಸುವುದಾಗಿ ಸಾಕ್ಷ್ಯಚಿತ್ರದ ನಿರ್ಮಾಪಕರು ಹೇಳಿದ್ದಾರೆ.


ಪ್ರಸ್ತುತ ಸಾಕ್ಷ್ಯಚಿತ್ರದಲ್ಲಿ ಬಳಸಲಾದ  ಫೋಟೋದಲ್ಲಿ ಶ್ರೀಲಂಕಾ ಪಡೆಯ ಕಸ್ಟಡಿಯಲ್ಲಿದ್ದ ಬಾಲಚಂದ್ರನ್ ಏನೂ ಗಾಯವಾಗದೆ ಬಂಕರ್ ಪಕ್ಕ ಕುಳಿತಿದ್ದಾನೆ. ಇದಾದ ನಂತರ ಸ್ವಲ್ಪ ಸಮಯ ಕಳೆದು ತೆಗೆದ ಫೋಟೋದಲ್ಲಿ ಆತನ ಎದೆಯನ್ನು ಗುಂಡು ಸೀಳಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಚಿತ್ರವಿದೆ. ಈ ಎಲ್ಲ ಫೋಟೋಗಳನ್ನು 2009 ಮೇ ತಿಂಗಳಲ್ಲಿ ತೆಗೆಯಲಾಗಿತ್ತು.

2009ರಲ್ಲಿ ಶ್ರೀಲಂಕಾ ಸರ್ಕಾರ ಮತ್ತು ಎಲ್‌ಟಿಟಿಇ ನಡುವಿನ ಗುಂಡಿನ ದಾಳಿ ನಡೆದಿದ್ದು ಅದರಲ್ಲಿ ಈ ಹುಡುಗನ ಹತ್ಯೆ ಮಾಡಲಾಗಿತ್ತು.

ಆದಾಗ್ಯೂ, ದಾಳಿ ನಡೆಯುವಾಗ ಪ್ರಭಾಕರನ್‌ನ ಪುತ್ರ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ ಎಂದು ಸೇನೆ ಹೇಳಿಕೆ ನೀಡಿತ್ತು.

ಆದರೆ ಫೋಟೋಗಳನ್ನು ಗಮನಿಸಿದರೆ, ಪ್ರಭಾಕರನ್‌ರ ಪುತ್ರರನ್ನು ಉಪಾಯವಾಗಿ ಸೆರೆಹಿಡಿದು, ತದನಂತರ ಸಮೀಪದಿಂದ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದೆ ಎಂಬ ಅಂಶ ತಿಳಿದುಬರುತ್ತಿದೆ ಎಂದು ಮಾಧ್ಯಮಗಳು ಲಂಕಾ ಮೇಲೆ ಆರೋಪ ಹೊರಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.