ವೀರಪ್ಪನ್ ಸಹಚರರಿಗೆ ಗಲ್ಲು: ತಡೆಯಾಜ್ಞೆ 6 ವಾರ ಮುಂದುವರಿಕೆ

ನವದೆಹಲಿ: ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಬುಧವಾರ ಸುಪ್ರೀಂ ಕೋರ್ಟ್ ಆರು ವಾರಗಳ ಕಾಲ ಮುಂದೂಡಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಕೋರಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವೀರಪ್ಪನ್‌ನ ನಾಲ್ವರು ಸಹಚರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 1993ರ ದೆಹಲಿ ಬಾಂಬ್ ಸ್ಫೋಟದ ಅಪರಾಧಿ ದೇವೇಂದ್ರಸಿಂಗ್ ಭುಲ್ಲರ್ ಪ್ರಕರಣ ಇನ್ನು ಇತ್ಯರ್ಥವಾಗಿಲ್ಲ. ಈ ಪ್ರಕರಣದಲ್ಲೂ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿದ್ದು, ಈ ಪ್ರಕರಣ ಇತ್ಯರ್ಥವಾದ ಬಳಿಕ ವೀರಪ್ಪನ್ ಸಹಚರರ ಗಲ್ಲು ಶಿಕ್ಷೆ ಬಗ್ಗೆ ಆದೇಶ ನೀಡುವುದಾಗಿ ಹೇಳಿದೆ.
ಕಳೆದ ಸೋಮುವಾರ ಮುಖ್ಯ ನ್ಯಾಯಮೂರ್ತಿ ಆಲ್ತಮಸ್ ಕಬೀರ್, ನ್ಯಾ.ಎ.ಆರ್.ದವೆ ಮತ್ತು ನ್ಯಾ.ವಿಕ್ರಮ್ಜಿತ್ ಸೆನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆಗೆ ಇಂದಿನವರೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಕ್ಷಮಾದಾನದ ಅರ್ಜಿ ವಿಲೇವಾರಿ ವಿಳಂಬ ಆಗಿರುವುದರಿಂದ ಶಿಕ್ಷೆಗೊಳಪಟ್ಟಿರುವ ನಾಲ್ವರಿಗೆ ಗಲ್ಲು ಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಕೋರಿ ಅಪರಾಧಿಗಳ ಪರ ವಕೀಲರು ಮನವಿ ಸಲ್ಲಿಸಿದ್ದರು.
ಅರ್ಜಿಯನ್ನು ಕ್ರಮಬದ್ಧವಾಗಿ ಸಲ್ಲಿಸದಿರುವುದರಿಂದ ವಿಚಾರಣಾರ್ಹವಲ್ಲ ಎಂದು ಒಂದು ಹಂತದಲ್ಲಿ ಹೇಳಿದ ಮುಖ್ಯ ನ್ಯಾಯಮೂರ್ತಿಗಳು, ಬುಧವಾರದೊಳಗೆ 'ವಕಾಲತ್ ನಾಮಕ್ಕೆ' ಅರ್ಜಿದಾರರಿಂದ (ಅಪರಾಧಿಗಳಿಂದ) ಸಹಿ ಪಡೆದು ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


