ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ಅವಮಾನಕರವಾದ ಸಂಗತಿ: ಕೆಮರೂನ್
Published On :
ಅಮೃತಸರ್ : ಜಲಿಯಾನ್ ವಾಲಾಭಾಗ್ ಗೆ ಬುಧವಾರ ಭೇಟಿ ನೀಡಿದ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ 1919ರಲ್ಲಿ ನಡೆದ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ಬ್ರಿಟಿಷ್ ಇತಿಹಾಸದಲ್ಲಿ ನಡೆದ ಅವಮಾನಕರ ಸಂಗತಿ ಎಂದು ಹೇಳಿದ್ದಾರೆ.
ಜಲಿಯಾನ್ ವಾಲಾಭಾಗ್ ನಲ್ಲಿರುವ ವಿಸಿಟರ್ಸ್ ಪುಸ್ತಕದಲ್ಲಿ ಕೆಮರೂನ್ ತಮ್ಮ ಈ ಮಾತನ್ನು ದಾಖಲಿಸಿದ್ದಾರೆ.
ಬ್ರಿಟಿಷ್ ರಾಜ್ ಕಾಲದಲ್ಲಿ ಜನರಲ್ ಡೆಯರ್ ನ ಆದೇಶದಂತೆ 1919ರಲ್ಲಿ ಜಲಿಯಾನ್ ವಾಲಾಭಾಗ್ ಹತ್ಯಾಕಾಂಡ ನಡೆದಿದ್ದು, ಇದರಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು.
ಪ್ರಸ್ತುತ ಹತ್ಯಾಕಾಂಡದ ಬಗ್ಗೆ ಮಹಾತ್ಮಾ ಗಾಂಧಿ ಈ ಘಟನೆಯು ಬ್ರಿಟಿಷ್ ಅಧಿಪತ್ಯದ ನೆಲೆಯಲ್ಲೇ ನಡುಗಿಸಿತ್ತು ಎಂದು ಅಂದಿದ್ದರು.
ಜಲಿಯಾನ್ ವಾಲಾಭಾಗ್ ಗ ಭೇಟಿ ನೀಡಿದ ಕೆಮರೂನ್ ಅಲ್ಲಿಂದ ಹೊರಡುವ ಮುನ್ನ ಒಂದು ನಿಮಿಷ ಕಾಲ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಅಮೃತಸರ್ ಗೆ ಬಂದಿಳಿದ ಕೆಮರೂನ್ ಸಿಖ್ಖರ ಸ್ವಣ೯ ಮಂದಿರಕ್ಕೂ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

