ಈಗಿನ ಸುದ್ದಿ

3 ಸಹೋದರಿಯರ ಅತ್ಯಾಚಾರ: ಹಣ ಬೇಡ, ನ್ಯಾಯ ಬೇಕು; ತಾಯಿ

Published On :

ಬಾಂದ್ರಾ: ನನಗೆ ಹಣ ಬೇಕಾಗಿಲ್ಲ, ನ್ಯಾಯ ಬೇಕು ಎಂದು ಅಮಾನುಷವಾಗಿ ಅತ್ಯಾಚಾರವೇಸಗಿ, ಹತ್ಯೆಯಾದ ಮೂವರು ಸೋಹದರಿಯರ ತಾಯಿ ಗುರುವಾರ ಹೇಳಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಬಾಲಕಿಯರ ಕುಟುಂಬಕ್ಕೆ 10 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ. ಆದರೆ ಬಾಲಕಿಯರ ತಾಯಿ ಮಾತ್ರ ತನಗೆ ಹಣ ಬೇಡ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ನನಗೆ ಯಾವುದೇ ಪರಿಹಾರ ಬೇಡ. ಆ ಹಣವನ್ನು ನನ್ನ ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಲು ಸರ್ಕಾರ ಬಳಸಿಕೊಳ್ಳಲಿ ಎಂದಿದ್ದಾರೆ.

ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ತಾಯಿ, ನನ್ನ ಮಕ್ಕಳು ನಾಪತ್ತೆಯಾದ ಮೊದಲ ದಿನವೇ ನಾನು ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ನನಗೆ ನ್ಯಾಯ ಬೇಕು. ಹಣದಿಂದ ನನ್ನ ಮಕ್ಕಳನ್ನು ವಾಪಸ್ ತರಲು ಸಾಧ್ಯವಿಲ್ಲ. ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ, ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರದ ಮೂವರು ಸೋಹದರಿಯರನ್ನು ಅತ್ಯಾಚಾರ ಎಸಗಿ ಹತ್ಯೆಗೈದ ಅಮಾನುಷ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು. ಫೆಬ್ರವರಿ 14ರಂದು ಶಾಲೆಯಿಂದ ಹಿಂತಿರುಗುತ್ತಿದ್ದ 11,9 ಹಾಗೂ 6 ವರ್ಷದ ಮೂವರು ಬಾಲಕಿಯರಿಗೆ ತಿಂಡಿ ಆಸೆ ತೋರಿಸಿ ಕರೆದೊಯ್ಯಲಾಗಿತ್ತು. ಇದಾಗಿ ನಾಲ್ಕು ದಿನದ ಬಳಿಕ ಈ ಮೂವರು ಸಹೋದರಿಯರ ಶವ ಗ್ರಾಮದಲ್ಲಿರುವ ಬಾವಿಯೊಂದರಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.