ಈಗಿನ ಸುದ್ದಿ

ಹೈ ಸ್ಫೋಟ ಪ್ರಕರಣದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ: ಪೊಲೀಸ್ ವರಿಷ್ಠಾಧಿಕಾರಿ

Published On :

ಹೈದ್ರಾಬಾದ್: ದಿಲ್‌ಸುಖ್‌ನಗರದಲ್ಲಿ ಗುರುವಾರ ಸಂಭವಿದ ಅವಳಿ ಬಾಂಬ್ ಸ್ಫೋಟದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಹೈದ್ರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಶರ್ಮಾ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಶರ್ಮಾ, ಶೀಘ್ರವೇ ಈ ಪ್ರಕರಣವವನ್ನು ಬೇಧಿಸಲಾಗುವುದು ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶರ್ಮಾ ಹೇಳಿದ ಮಾತಿನ ಸಾರ ಇಲ್ಲಿದೆ:

  • ಪ್ರಕರಣದ ಬಗ್ಗೆ ತನಿಖೆ ನಡೆಸಲು ನಾವು 6 ವಿಶೇಷ ತಂಡಗಳನ್ನು ರಚಿಸಿದ್ದೇವೆ. ನಾವು ಈಗಾಗಲೇ ಸಾಕ್ಷ್ಯಗಳನ್ನು ಸಂಗ್ರಹಿಸ ತೊಡಗಿದ್ದು, ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದೇವೆ.
  • ಇನ್ಮುಂದೆ ಇಂಥಾ ಕೃತ್ಯಗಳು ನಡೆಯದಂತೆ ತಡೆಯಲು ನಾವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
  • ಸಿನಿಮಾ ಹಾಲ್, ಮಾಲ್‌ಗಳಂತಹ ಜನ ನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ
  • ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಯಾರಾದರೂ ನಮಗೆ ಮಾಹಿತಿ ನೀಡಿದರೆ ಅವರಿಗೆ ರು.10 ಲಕ್ಷ ಬಹುಮಾನ ನೀಡಬೇಕೆಂದು ನಾನು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ.
  • ನಾವು ತಪ್ಪಿತಸ್ಥರನ್ನು ಸೆರೆ ಹಿಡಿಯುತ್ತೇವೆ.
  • ಟ್ರಾಫಿಕ್ ನಿರ್ವಹಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು  ಇರಿಸಲಾಗಿದ್ದು, ದಿಲ್‌ಸುಖ್‌ನಗರದಲ್ಲಿರುವ ಸಿಸಿಟಿವಿ ಕಾರ್ಯವೆಸಗುತ್ತಿದೆ. ನಮಗೆ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳು ಲಭ್ಯವಾಗಿವೆ.
  • ಸಿಸಿಟಿವಿ ಕ್ಯಾಮೆರಾದ ವಯರ್‌ಗಳನ್ನು ತುಂಡರಿಸಲಾಗಿದೆ ಎಂದು ಹೇಳಿರುವ ಸುದ್ದಿ ಸುಳ್ಳು.
  • ಗುಪ್ತಚರ ಇಲಾಖೆಯ ಯಾವುದೇ ಮಾಹಿತಿಯನ್ನು ಲಘುವಾಗಿ ಪರಿಗಣಿಸಿಲ್ಲ
  • ಫೆ.15ಕ್ಕೆ ಲಭಿಸಿದ ಮಾಹಿತಿಯಲ್ಲಿ ಹೈದ್ರಾಬಾದ್ ಮತ್ತು ಇತರ ಮೂರು ನಗರಗಳಲ್ಲಿ ದಾಳಿ ಸಂಭವಿಸುವ ಸಾಧ್ಯತೆಯಿತ್ತು ಎಂದು ಹೇಳಲಾಗಿತ್ತು. ನಾವು ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು  ತೆಗೆದುಕೊಂಡಿದ್ದು, ಬಿಗಿ ಭದ್ರತೆ ಏರ್ಪಡಿಸಿದ್ದೆವು.
  • ಕಳೆದ ವರ್ಷ ನವಂಬರ್ 15ರಂದು ನಮ್ಮ ಗುಪ್ತಚರ ತಂಡವು ದೆಹಲಿಗೆ ತೆರಳಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದೆವು. ಈ ಸದಸ್ಯರು ದಿಲ್‌ಸುಖ್ ನಗರ್, ಟ್ಯಾಂಕ್‌ಬಂಡ್ ಮತ್ತು ಬೇಗಂ ಬಜಾರ್‌ನಲ್ಲಿ ಸುತ್ತಾಡಿ ದಾಳಿಗೆ  ಸಂಚು ರೂಪಿಸಿದ್ದರು. ಇದರಲ್ಲಿ ಭಾಗಿಯಾಗಿದ್ದ ಸದಸ್ಯರನ್ನು ಈಗಾಗಲೇ ಬಂಧಿಸಲಾಗಿದೆ.
  • ಕಳೆದ ವರ್ಷ ನವಂಬರ್‌ನಲ್ಲಿ ನಾವು ದಾಳಿಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಿದ್ದೆವು.
  • ಕಳೆದ ನವಂಬರ್ ತಿಂಗಳಿನಿಂದ ನಾವು ಎಲ್ಲ ವಾಹನಗಳ ತಪಾಸಣೆ ಮಾಡುತ್ತಾ ಬರುತ್ತಿದ್ದೇವೆ. ಇಂಥಾ ದಾಳಿಗಳನ್ನು ತಡೆಯಲು ಅಣಕ ಕವಾಯತುಗಳನ್ನೂ ಮಾಡಿದ್ದೇವೆ.
  • ನಮ್ಮ ನಗರದಲ್ಲಿ 16 ಬಾಂಬ್ ನಿಷ್ಕೃಯ ದಳಗಳಿದ್ದು, ಅವುಗಳನ್ನು ಅಗತ್ಯ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
  • ನಮ್ಮ ಕರ್ತವ್ಯದ ಬಗ್ಗೆ ನಾನು ಯಾರಿಗೂ ವಿವರಣೆ ನೀಡಲು ಬಯಸುವುದಿಲ್ಲ, ನಾವು ನಮ್ಮ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿದ್ದೇವೆ.
  •  ಈ ಪ್ರಕರಣಕ್ಕೆ ಸಂಬಂಧ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
  • ಕಳೆದ ಎರಡು ದಿನಗಳಿಂದ ಸಿಸಿಟಿವಿ ದೃಶ್ಯಾವಳಿ, ಇನ್ನಿತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.
  •  ಸ್ಫೋಟಕ್ಕಾಗಿ ಅಮೋನಿಯಂ ನೈಟ್ರೇಟ್ ಬಳಸಲಾಗಿದೆ.
  • ತನಿಖೆಯ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.