ಈಗಿನ ಸುದ್ದಿ

ಹೈ ಸ್ಫೋಟ: ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ಸೆರೆ

Published On :

ಹೈದ್ರಾಬಾದ್: ಅವಳಿ ಬಾಂಬ್ ಸ್ಫೋಟ ಸಂಭವಿಸಿದ ದಿಲ್‌ಸುಖ್‌ನಗರನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಓರ್ವ ಶಂಕಿತ ಸೆರೆಯಾಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗುರುವಾರ ದಿಲ್‌ಸುಖ್‌ನಗರದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು  16 ಜನರು ಸಾವನ್ನಪ್ಪಿದ್ದು ಮಾತ್ರವಲ್ಲದೆ ನೂರಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು.

ಪ್ರಸ್ತುತ ಪ್ರದೇಶದಲ್ಲಿ ಸೈಕಲ್ ಕ್ಯಾರಿಯರ್‌ನಲ್ಲಿ ಬಾಂಬ್ ಇರಿಸಿ ಸ್ಫೋಟ ಮಾಡಲಾಗಿತ್ತು. ಅಲ್ಲಿನ ದೃಶ್ಯಗಳನ್ನು ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದಿದ್ದು, ಇದರಲ್ಲಿ ಮೂವತ್ತರ ಹರೆಯದ ವ್ಯಕ್ತಿಯೊಬ್ಬ ಸ್ಫೋಟಕ್ಕೆ ಮುನ್ನ ಸೈಕಲ್‌ನಲ್ಲಿ ಬ್ಯಾಗ್ ಒಂದನ್ನು ಇರಿಸುವ ದೃಶ್ಯವಿದೆ.

ಬಾಂಬ್ ಸ್ಫೋಟ ನಡೆದ ಪ್ರದೇಶದ ಪಕ್ಕದಲ್ಲಿರುವ ಟ್ರಾಫಿಕ್ ಸಿಗ್ನಲ್‌ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಈ ದೃಶ್ಯದಲ್ಲಿ ಕಂಡಂತೆ ಗುರುವಾರ ಸಂಜೆ 6.38ಕ್ಕೆ ವ್ಯಕ್ತಿಯೊಬ್ಬ ಸೈಕಲ್‌ನಲ್ಲಿ ದಿಲ್‌ಸುಖ್‌ನಗರದ ಜನನಿಬಿಡ ಪ್ರದೇಶಕ್ಕೆ ಆಗಮಿಸಿದ್ದಾನೆ. ತದನಂತರ ಆ ಸೈಕಲ್‌ನಲ್ಲಿ ಬ್ಯಾಗ್ ಒಂದನ್ನು ಇರಿಸಿ ಆತ ಅಲ್ಲಿಂದ ಮರಳಿದ್ದಾನೆ. ಆನಂದ್ ಟಿಫಿನ್ ಸೆಂಟರ್‌ನ ಮುಂದೆ ಕೊನಾರ್ಕ್ ಥಿಯೇಟರ್ ಬಳಿ 6.58ಕ್ಕೆ ಬಾಂಬ್ ಸ್ಫೋಟ ಸಂಭವಿಸಿತ್ತು. ಇದಾದ ನಂತರ 7.01ಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಬಾಂಬ್ ಸ್ಫೋಟಗೊಂಡಿತ್ತು. ಈ ಎರಡೂ ಪ್ರದೇಶಗಳಲ್ಲಿ ಹಳೆಯ ಸೈಕಲ್‌ನಲ್ಲೇ ಬಾಂಬ್ ಇರಿಸಲಾಗಿತ್ತು.

ದಿಲ್‌ಸುಖ್‌ನಗರದ ಬಸ್ ಸ್ಟೇಷನ್‌ನಲ್ಲಿರಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತನ ಚಿತ್ರ ಸೆರೆಯಾಗಿದ್ದು, ಇದರಲ್ಲಿ ಆತನ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದಾಗ್ಯೂ, ಈತ ಉದ್ದ ತೋಳಿನ ಅಂಗಿ ಧರಿಸಿದ್ದು, ಹಸಿರು ಪ್ಯಾಂಟ್ ಧರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದು, ಈತನ ಪತ್ತೆಗಾಗಿ ತಜ್ಞರ ಸಹಾಯ ಪಡೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.