'ಲೈಫ್ ಆಫ್ ಪೈ'ಗೆ 4 ಆಸ್ಕರ್ ಪ್ರಶಸ್ತಿ

ಲಾಸ್ಏಂಜಲೀಸ್: ಇರ್ಫಾನ್ ಖಾನ್ ಹಾಗೂ ಟಬು ಅಭಿನಯದ 'ಲೈಫ್ ಆಫ್ ಪೈ' ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯುತ್ತಿರುವ 85ನೇ ವರ್ಣರಂಜಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೈಫ್ ಆಫ್ ಫೈ ಚಿತ್ರ ನಾಲ್ಕು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
'ಲೈಫ್ ಆಫ್ ಪೈ' ಅತ್ಯುತ್ತಮ ಛಾಯಾಗ್ರಹಣ, ನಿರ್ದೇಶನ, ವಿಶ್ಯುವಲ್ ಎಫೆಕ್ಟ್ ಹಾಗೂ ಒರಿಜಿನಲ್ ಸ್ಕೋರ್ಗಾಗಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ನಾಲ್ಕು ಕೋಟಿ ರುಪಾಯಿ ಗಳಿಸಿತ್ತು. ಮತ್ತೊಂದು ವಿಶೇಷವೆಂದರೆ 'ಲೈಫ್ ಆಫ್ ಪೈ ಚಿತ್ರದಲ್ಲಿ ಬೆಂಗಳೂರಿನ ಹುಡುಗ ಗೌತಮ್ ಬೇಳೂರು ಅವರು ಅಭಿನಯಿಸಿದ್ದಾರೆ.
'ಲಿಂಕೊನ್' ಚಿತ್ರದ ಅಭಿನಯಕ್ಕಾಗಿ ಡೇನಿಯಲ್ ಡೇ ಲೆವಿಸ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಸಿಲ್ವರ್ ಲೈನಿಂಗ್ ಪ್ರೇ ಬುಕ್ ಚಿತ್ರದ ಅಭಿನಯಕ್ಕಾಗಿ ಜೆನ್ನಿಫರ್ ಲಾರೆನ್ಸ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡೇನಿಯಲ್ ಅವರಿಗೆ ಇದು ಮೂರನೇ ಆಸ್ಕರ್ ಪ್ರಶಸ್ತಿಯಾಗಿದೆ. ಇನ್ನು ಜ್ಯಾಂಗೋ ಅನ್ಚೈನ್ಡ್ ಚಿತ್ರದ ಅಭಿನಯಕ್ಕಾಗಿ ಕ್ರಿಸ್ಟೋಫರ್ ವಾಲ್ಟ್ ಅವರು ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
'ಲೆಸ್ ಮಿಸರೆಬಲ್' ಹಾಗೂ 'ಆರ್ಗ್ರೋ' ತಲಾ ಮೂರು ಆಸ್ಕರ್ ಪ್ರಶಸ್ತಿ ಪಡೆದುಕೊಂಡಿವೆ. 'ಸ್ಕೈಪಾಲ್' ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರೆ, 'ಬ್ರೇವ್' ಅತ್ಯುತ್ತಮ ಅನಿಮೇಟೆಡ್ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


