ಬನ್ಸಲ್ ಬಜೆಟ್ನ ಮುಖ್ಯಾಂಶಗಳು
ನವದೆಹಲಿ: 2013 ಹಾಗೂ 2014ನೇ ಸಾಲಿನ ರೇಲ್ವೆ ಬಜೆಟ್ ಮಂಡನೆ ಆರಂಭಿಸಿರುವ ಸಚಿವ ಪವನ್ಕುಮಾರ್ ಬನ್ಸಲ್ ಅವರು, ಮೊದಲ ಬಾರಿಗೆ ರೇಲ್ವೆ ಬಜೆಟ್ ಮಂಡಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
17 ವರ್ಷದ ಬಳಿಕ ರೇಲ್ವೆ ಬಜೆಟ್ ಮಂಡಿಸುತ್ತಿರುವ ಕಾಂಗ್ರೆಸ್ನ ಸಚಿವ ಬನ್ಸಲ್, ಭಾರತದ ರೇಲ್ವೆ ಇಲಾಖೆ ಆರ್ಥಿಕವಾಗಿ ಸುಸ್ಥಿರವಾಗಿರಬೇಕು. ಎಲ್ಲ ಗ್ರಾಹಕರಿಗೆ ಸಮರ್ಪಕ ಸೇವೆ ಲಭಿಸಬೇಕು ಮತ್ತು ರೈಲು ಅಪಘಾತವನ್ನು ನಿಯಂತ್ರಿಸಬೇಕಿದೆ ಎಂದು ಹೇಳಿದರು.
ಹೊಸ ಯೋಜನೆ ಹಾಗೂ ಹೊಸ ಹೊಸ ರೈಲುಗಳಿಗೆ ಬೇಡಿಕೆ ಬಂದಿದೆ. ಆದರೆ ರೇಲ್ವೆ ಇಲಾಖೆ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ ಎಂದರು.
ಯೋಜನಾ ಆಯೋಗ ರೇಲ್ವೆ ಬಜೆಟ್ನ್ನು 5.19 ಲಕ್ಷ ಕೋಟಿ ರುಪಾಯಿಗೆ ನಿಗದಿಗೊಳಿಸಿದೆ. ಫಂಡ್ ಕಡಿಮೆಯಾದ ಕಾರಣ ಹಲವು ಯೋಜನೆಗಳು ನಿಂತಿವೆ. ಗುಣಮಟ್ಟದ ಸೇವೆ ನೀಡಲು ರೇಲ್ವೆ ಇಲಾಖೆ ಬದ್ಧವಾಗಿದೆ. ಆದರೆ ಇದಕ್ಕಾಗಿ ಇಲಾಖೆಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಬನ್ಸಲ್ ಬಜೆಟ್ನ ಮುಖ್ಯಾಂಶಗಳು
ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ವಿಶೇಷ ಪಾಸ್
ಮಾಹಿತಿ ಮತ್ತು ದೂರುಗಳ ಟೋಲ್ ಫ್ರೀ ನಂಬರ್ ಬದಲಾವಣೆ, 1800-111-321 ಹೊಸ ಟೋಲ್ ಫ್ರೀ ನಂಬರ್
ರೈಲುಗಳ ಆಗಮನ, ನಿರ್ಗಮನದ ಬಗ್ಗೆ ಮಾಹಿತಿ
ಸಿಕಂದರಬಾದ್ನಲ್ಲಿ ಹಣಕಾಸು ನಿರ್ವಹಣಾ ಸಂಸ್ಥೆ ಸ್ಥಾಪನೆ
47 ಸಾವಿರ ಶೋಷಿತ ವರ್ಗ ಹಾಗೂ ವಿಕಲಾಂಗ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ
ಬೋಗಿಯಲ್ಲಿ ಅಗ್ನಿ ದುರಂತ ತಡೆಯಲು ಕ್ರಮ
ಪ್ರತಿವರ್ಷ ಶೇ.5ರಷ್ಟಾದರೂ ಟಿಕೆಟ್ ದರ ಹೆಚ್ಚಳ ಅಗತ್ಯ
ಶತಾಬ್ದಿ ಮತ್ತು ರಾಜಧಾನಿ ಎಕ್ಸ್ಪ್ರೆಸ್ಗಳಲ್ಲಿ ಒಂದೊಂದು ಅತ್ಯಾಧುನಿಕ ಕೋಚ್
ಟಿಕೆಟ್ ರಿಸರ್ವೇಷನ್ ಕೌಂಟರ್ಗಳ ಆಧುನಿಕರಣ
ರಾಷ್ಟ್ರ ರಾಜಧಾನಿ ವಲಯದಲ್ಲಿ ಹೆಚ್ಚಿನ ಹೊಸ ಸೌಲಭ್ಯ
ಹಿರಿಯ ನಾಗರಿಕರಿಗಾಗಿ ನಿಲ್ದಾಣಗಳಲ್ಲಿ 400 ಲಿಫ್ಟ್
ರೇಲ್ವೆ ಇಲಾಖೆಯಿಂದ ಆರು ನೀರಿನ ಬಾಟಲಿ ತಯಾರಿಕಾ ಘಟಕ ಸ್ಥಾಪನೆ
60ಕ್ಕು ಹೆಚ್ಚು ನಗರಗಳಲ್ಲಿ ಆರ್ಆರ್ಬಿ ಪರೀಕ್ಷೆ
ಕತ್ರಾ-ವೈಷ್ಣೋದೇವಿ ಯಾತ್ರಿಗಳಿಗೆ ರೈಲು ಮತ್ತು ಬಸ್ ಪ್ರಯಾಣಕ್ಕೆ ಏಕ ಟಿಕೆಟ್ ವ್ಯವಸ್ಥೆ ಜಾರಿಗೆ
ರಾಷ್ಟ್ರೀಯ ವಿವಿಗಳಲ್ಲಿ ರೇಲ್ವೆ ಫೆಲೋಶಿಫ್ ಸ್ಥಾಪನೆ
ರಾಯ್ಬರೇಲಿಯಲ್ಲಿ ಕೋಚ್ ಫ್ಯಾಕ್ಟರಿ ಸ್ಥಾಪನೆ
ಎಲ್ಲ ರೇಲ್ವೆ ನಿಲ್ದಾಣಗಳಲ್ಲಿ ಆಹಾರ ಪರೀಕ್ಷಾ ಕೇಂದ್ರಗಳ ಸ್ಥಾಪನೆ
ರೇಲ್ವೆ ಉದ್ಯೋಗಿಗಳ ವಸತಿಗಾಗಿ 300 ಕೋಟಿ
ದೇಶದ ಗಡಿ ಪ್ರದೇಶಕ್ಕೆ ರೈಲು ಸೌಲಭ್ಯಕ್ಕೆ ಚಿಂತನೆ
2012-13ನೇ ಸಾಲಿನವರೆಗೆ ರೇಲ್ವೆ ಇಲಾಖೆ 24 ಸಾವಿರ ಕೋಟಿ ರುಪಾಯಿ ನಷ್ಟ ಅನುಭವಿಸಿದೆ.
ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಈ ಸಂಬಂಧ ಆರ್ಪಿಎಫ್ನಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಚಿಂತನೆ.
ಅಪಘಾತ ವೇಳೆ ತುರ್ತು ನೆರವಿಗೆ ವಿಶೇಷ ರೈಲು
ರೈಲುಗಳಿಗೆ ಉಚಿತ ವೈ ಫೈ ವ್ಯವಸ್ಥೆ
104 ರೇಲ್ವೆ ನಿಲ್ದಾಣಗಳಲ್ಲಿನ ಸೌಲಭ್ಯಗಳ ಉನ್ನತಿಕರಣಕ್ಕೆ ನಿರ್ಧಾರ
ಮೊಬೈಲ್ ಮೂಲಕ ಟಿಕೆಟ್ ಬುಕ್ಕಿಂಗ್ ಸೌಲಭ್ಯ
ಇಂಟರ್ನೆಟ್ ಟಿಕೆಟ್ ಬುಕ್ಕಿಂಗ್ ಅವಧಿ ವಿಸ್ತರಣೆ
ರೈಲಿನಲ್ಲಿನ ಅಡುಗೆ ಕೊಣೆಗಳಿಗೆ ಐಎಸ್ಒ ಮಾನ್ಯತೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

