ಈಗಿನ ಸುದ್ದಿ

ರೈಲಿನಡಿಗೆ ಸಿಕ್ಕಿ 2 ಮಕ್ಕಳು ದುರ್ಮರಣ; ರೇಲ್ವೇ ನಿಲ್ದಾಣಕ್ಕೆ ಬೆಂಕಿ

Published On :

ಭೋಪಾಲ್: ಮಂಗಳವಾರ ರೈಲಿನಡಿಗೆ ಸಿಕ್ಕಿ ಇಬ್ಬರು ಮಕ್ಕಳು ದುರ್ಮರಣಕ್ಕೀಡಾಗಿದ್ದಕ್ಕೆ ಕುಪಿತಗೊಂಡ ಜನರು ರೇಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ರೇಲ್ವೇ ನಿಲ್ದಾಣ ಹೊತ್ತಿ ಉರಿದಿದ್ದು, ಈ ಘಟನೆಯಲ್ಲಿ  ರೇಲ್ವೇ ನೌಕರನೊಬ್ಬ ಸಾವಿಗೀಡಾಗಿದ್ದಾನೆ.

ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗುಲಾಬ್‌ಗಂಜ್ ರೇಲ್ವೇ ನಿಲ್ದಾಣ ಬೆಂಕಿಗಾಹುತಿಯಾಗಿದೆ. ಆಕ್ರೋಶಗೊಂಡ ಜನರು ರೇಲ್ವೇ ನಿಲ್ದಾಣದೊಳಗೆ ನುಗ್ಗಿ ಅಲ್ಲಿನ ವಸ್ತುಗಳನ್ನು ನಾಶಗೈದಿದ್ದಾರೆ.

ಪ್ರಸ್ತುತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವರೆಗೆ ದೆಹಲಿ-ಭೋಪಾಲ್ ರೂಟ್‌ನಲ್ಲಿ ಸಾಗುವ ರೈಲಿಗಳನ್ನು ಸ್ಥಗಿತಗೊಳಿಸಲಾಗಿದೆ.

ಗುಲಾಬ್‌ಗಂಜ್‌ನ ಸೆಂಟ್ರಲ್ ರೇಲ್ವೇ ಸ್ಟೇಷನ್‌ನಲ್ಲಿ ರೈಲು ಆಗಮನದ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿತ್ತು. ಈ ರೇಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರು ಸಾಗಲು ಯಾವುದೇ ಸೇತುವೆ ಇಲ್ಲದ ಕಾರಣ, ಜನರು ರೇಲ್ವೇ ಹಳಿಗಳನ್ನು ದಾಟಿಯೇ ಇನ್ನೊಂದು ದಡ ಸೇರಬೇಕಿತ್ತು.

ಮಂಗಳವಾರ ಬೆಳಗ್ಗೆ ರೈಲು ಇನ್ನೊಂದು ಹಳಿಯಲ್ಲಿ ಸಂಚರಿಸುತ್ತಿದೆ ಎಂದು ರೈಲು ನಿಲ್ದಾಣದಿಂದ ಉದ್ಘೋಷಣೆ ಮಾಡಲಾಗಿತ್ತು. ಇದನ್ನು ಕೇಳಿದ ಜನರು, ಮಕ್ಕಳು ಪಕ್ಕದಲ್ಲೇ ಗೂಡ್ಸ್ ರೈಲು ನಿಂತಿದ್ದ ಹಳಿಯಲ್ಲಿ ದಾಟುತ್ತಿದ್ದರು. ಆ ವೇಳೆ ಅಲ್ಲಿನ ಸ್ಟೇಷನ್ ಮಾಸ್ಟರ್ ತಪ್ಪಾಗಿ ಗೂಡ್ಸ್ ರೈಲಿಗೆ ಗ್ರೀನ್ ಸಿಗ್ನಲ್ ತೋರಿಸಿದ್ದಾನೆ.

ಸಿಗ್ನಲ್ ತೋರಿಸಿದ ಕೂಡಲೇ ಗೂಡ್ಸ್ ರೈಲು ಚಾಲನೆಯಾಗಿದ್ದು, ಇದು ಹಳಿ ದಾಟುತ್ತಿದ್ದ ಇಬ್ಬರು ಮಕ್ಕಳ ಪ್ರಾಣ ತೆಗೆದುಕೊಂಡಿದೆ.

ಗೂಡ್ಸ್ ರೈಲಿನೆಡೆಗೆ ಸಿಕ್ಕಿ 5ರ ಹರೆಯದ ಮೊಹಮ್ಮದ್ ಅಲಿ ಮತ್ತು ಆತನ ಅಕ್ಕ 8 ರ ಹರೆಯದ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ರೇಲ್ವೇ ಪೊಲೀಸರು ಹೇಳಿದ್ದಾರೆ.

ಈ ಘಟನೆಯನ್ನು ಖಂಡಿಸಿ ಅಲ್ಲಿನ ಗ್ರಾಮಸ್ಥರು ರೈಲುಗಳಿಗೆ ತಡೆಯೊಡ್ಡಿದ್ದು ಮಾತ್ರವಲ್ಲದೆ ರೇಲ್ವೇ ಹಳಿಗಳನ್ನೂ ಹಾನಿ ಮಾಡಿದ್ದಾರೆ. ಇದರಿಂದಾಗಿ ಈ ರೂಟ್‌ನಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ಬಿನಾ, ಭೋಪಾಲ್ ಮತ್ತು ವಿದಿಶಾ ರೇಲ್ವೆ ನಿಲ್ದಾಣಗಳಲ್ಲಿ ಸ್ಥಗಿತಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.