ಈಗಿನ ಸುದ್ದಿ

ಕೇಂದ್ರ ಬಜೆಟ್‌ 2013-14 ಮುಖ್ಯಾಂಶಗಳು

Published On :
  • ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ 6,245 ಕೋಟಿ
  • ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
  • 1 ಕೋಟಿಗಿಂತ ಹೆಚ್ಚು ತೆರಿಗೆ ಪಾವತಿದಾರರ ಮೇಲೆ ಶೇ.10ರಷ್ಟು ಸರ್ಚ್ ಚಾರ್ಜ್
  • 5 ಲಕ್ಷ ರುಪಾಯಿ ವರೆಗಿನ ಆದಾಯಕ್ಕೆ 2 ಸಾವಿರ ರು ತೆರಿಗೆ ವಿನಾಯಿತಿ
  • ಜವಾಹರ್‌ಲಾಲ್ ನೆಹರು ನ್ಯಾಷನಲ್ ಅರ್ಬನ್ ರಿನೀವಲ್ ಮಿಷನ್‌ಗೆ 14,873 ಕೋಟಿ
  • ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಿಗೆ ಹೆಚ್ಚಿನ ಅನುದಾನ
  • ಆಹಾರ ಭದ್ರತೆಗಾಗಿ 9,954 ಕೋಟಿ
  • ಮೂಲಸೌಕರ್ಯ ಅಭಿವೃದ್ಧಿಗೆ 53 ಲಕ್ಷ ಕೋಟಿ
  • ಗ್ರಾಮ ಸಡಕ್ ಯೋಜನೆಗೆ 27 ಸಾವಿರ ಕೋಟಿ
  • ಗ್ರಾಮೀಣ ಅಭಿವೃದ್ಧಿ ಇಲಾಖೆಗೆ 80,194 ಕೋಟಿ
  • ಇಂದಿರಾ ಆವಾಸ್ ಯೋಜನೆಗೆ 15,184 ಸಾವಿರ ಕೋಟಿ
  • ಕೃಷಿ ಕ್ಷೇತ್ರಕ್ಕೆ 27,047 ಕೋಟಿ
  • ಎಲೆಕ್ಟ್ರಿಕಲ್ ಮಿಷನರಿಗಳಿಗೆ ಸೀಮಾ ಸುಂಕದಿಂದ ವಿನಾಯಿತಿ
  • ನಬಾರ್ಡ್‌ಗೆ 5 ಸಾವಿರ ಕೋಟಿ ಅನುದಾನ
  • ಕುಡಿಯುವ ನೀರು ಯೋಜನೆಗೆ 15,260 ಕೋಟಿ
  • ಬೆಳೆ ವೈವಿಧ್ಯತೆ ಉತ್ತೇಜನ ಯೋಜನೆಗೆ 500 ಕೋಟಿ
  • ನರ್ಮ್ ಯೋಜನೆಗೆ 10 ಸಾವಿರ ಕೋಟಿ
  • ರಾಂಚಿಯಲ್ಲಿ ಕೃಷಿ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ
  • ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿಗೆ ಕ್ರಮ
  • ಕೈಮಗ್ಗ ಅಭಿವೃದ್ಧಿಗೆ 96 ಕೋಟಿ
  • ಟೆಕ್ಸ್‌ಟೈಲ್ ಪಾರ್ಕ್‌ಗಳ ಸ್ಥಾಪನೆಗೆ 50 ಕೋಟಿ
  • ಮಕ್ಕಳ ಕಲ್ಯಾಣ ಇಲಾಖೆ- 17,700 ಕೋಟಿ
  • ಆರೋಗ್ಯ ಮತ್ತು ಶಿಕ್ಷಣಕ್ಕೆ 47,230 ಕೋಟಿ
  • ಪೌಷ್ಠಿಕ ಆಹಾರ ಪೂರೈಕೆಗೆ 300 ಕೋಟಿ
  • 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಎಲ್ಲ ನಗರಗಳಲ್ಲಿ ಎಳ್‌ಐಸಿ ಕಚೇರಿ
  • ದೇಶದ ಮೊದಲ ಮಹಿಳಾ ಸರ್ಕಾರಿ ಬ್ಯಾಂಕ್ ಸ್ಥಾಪನೆ, ಮಹಿಳಾ ಬ್ಯಾಂಕ್‌ಗೆ 1,000 ಕೋಟಿ ಅನುದಾನ
  • ಗ್ರಾಮೀಣ ಮನೆ ನಿರ್ಮಾಣ ಯೋಜನೆಗೆ ಹೆಚ್ಚಿನ ಸಾಲ ಸೌಲಭ್ಯ
  • ಗ್ರಾಮೀಣ ವಸತಿ ಯೋಜನೆಗೆ 6 ಸಾವಿರ ಕೋಟಿ ಮೀಸಲು
  • ನಗರ ವಸತಿಗೆ 2 ಸಾವಿರ ಕೋಟಿ
  • ಗೃಹ ಸಾಲ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಳ
  • ದೇಶದಲ್ಲಿ ಹೊಸದಾಗಿ ಎರಡು ಬಂದರು ಸ್ಥಾಪನೆ ಒಂದು ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಆಂಧ್ರಪ್ರದೇಶದಲ್ಲಿ.
  • ಜವಳಿ ತಂತ್ರಜ್ಞಾನ ಅಭಿವೃದ್ಧಿಗೆ 2,400 ಕೋಟಿ
  • 6 ನೂತನ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಗಳ ಸ್ಥಾಪನೆ
  • ಸರ್ವಶಿಕ್ಷಣ ಅಭಿಯಾನ ಶಿಕ್ಷಣದ ಹಕ್ಕು ಜಾರಿಗೆ 27,286 ಕೋಟಿ
  • ಮಾನವ ಸಂಪನ್ಮೂಲ ಇಲಾಖೆಗೆ 65,867 ಕೋಟಿ
  • ಆಯುಷ್ ಇಲಾಖೆಗೆ 1,069 ಕೋಟಿ
  • ಜಲಾನಯನ ಪ್ರದೇಶ ಅಭಿವೃದ್ಧಿಗೆ 53,871 ಕೋಟಿ
  • ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,000 ಕೋಟಿ
  • ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ಮುಂದುವರಿಕೆ (ಸಾಲ ಮರುಪಾವತಿ ಮಾಡಿದ ರೈತರಿಗೆ ಮಾತ್ರ ಅನ್ವಯ)
  • ಗ್ರಾಮೀಣ ಉದ್ಯೋಗ ಖಾತ್ರಿಗೆ 33,000 ಕೋಟಿ
  • 7 ಲಕ್ಷ ಕೋಟಿ ಕೃಷಿ ಸಾಲ ನೀಡುವ ಗುರಿ
  • ವಿಕಲಚೇತನರಿಗೆ 110 ಕೋಟಿ
  • ರಕ್ಷಣಾ ಇಲಾಖೆಗೆ 2 ಲಕ್ಷ ಕೋಟಿ ಮೀಸಲು
  • ಪಟಿಯಾಲದಲ್ಲಿ ಕ್ರೀಡಾ ತರಬೇತಿ ಕೇಂದ್ರ
  • ಹೊಸದಾಗಿ 289 ಎಫ್‌ಎಂ ರೇಡಿಯೋ ಚಾನೆಲ್‌ಗಳ ಲೈಸೆನ್ಸ್ ಹರಾಜು
  • ಜವಳಿ ತಂತ್ರಜ್ಞಾನ ಅಭಿವೃದ್ಧಿಗೆ 2400 ಕೋಟಿ
  • ಮಹಿಳೆಯರ ರಕ್ಷಣೆಗೆ 1000 ಕೋಟಿ ಅನುದಾನ 'ನಿರ್ಭಯಾಳ' ಹೆಸರಲ್ಲಿ ನಿಧಿ ಸ್ಥಾಪನೆ
  • ಅಣುಶಕ್ತಿ ಇಲಾಖೆಗೆ 5.400 ಕೋಟಿ
  • ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಆರೋಗ್ಯ ವಿಮೆ
  • ತೆರಿಗೆ ಆಡಳಿತ ಸುಧಾರಣಾ ಸಮಿತಿ ರಚನೆ
    ಯಾವುದು ದುಬಾರಿ:
      1. ಸೆಟ್‌ಅಪ್ ಬಾಕ್ಸ್‌ಗಳು ಮತ್ತಷ್ಟು ದುಬಾರಿ (ಸೆಟ್‌ಟಾಪ್ ಬಾಕ್ಸ್ ಆಮದು ಸುಂಕ ಶೇ.5ರಿಂದ 10ಕ್ಕೆ ಹೆಚ್ಚಳ)
      2. ವಿದೇಶಿ ಕಾರುಗಳ ಬೆಲೆ ಮತ್ತಷ್ಟು ದುಬಾರಿ
      3. ಸಿಗರೇಟ್ ಬೆಲೆ ಮತ್ತಷ್ಟು ದುಬಾರಿ, ಸಿಗರೇಟ್ ಮೇಲಿನ ತೆರಿಗೆ ಶೇ.18ಕ್ಕೆ ಏರಿಕೆ
      4. 800 ಸಿಸಿ ಮೇಲ್ಪಟ್ಟ ಬೈಕ್‌ಗಳ ಸುಂಕ ಶೇ.60ರಿಂದ ಶೇ.75ಕ್ಕೆ ಏರಿಕೆ
      5. ಎಲ್ಲ ಎಸಿ ರೆಸ್ಟೋರೆಂಟಗಳ ಸೇವಾ ತೆರಿಗೆ ಹೆಚ್ಚಳ
      6. 2 ಸಾವಿರ ರುಪಾಯಿಗೂ ಮೇಲ್ಪಟ್ಟ ಮೊಬೈಲ್‌ಗೆ ಶೇ.6ರಷ್ಟು ತೆರಿಗೆ
      7. 50 ಸಾವಿರ ರುಪಾಯಿವರೆಗಿನ ಚಿನ್ನ ಖರೀದಿಗೆ ಸುಂಕ ಇಲ್ಲ(ಪುರುಷರಿಗೆ)
      8. 1 ಲಕ್ಷದವರೆಗಿನ ಚಿನ್ನ ಖರೀದಿಗೆ ಸುಂಕ ಇಲ್ಲ (ಮಹಿಳೆಯರಿಗೆ)

    Follow KannadaPrabha channel on WhatsApp

    Subscribe to KannadaPrabha YouTube Channel and watch Videos

    Download the KannadaPrabha News app to follow the latest news updates

    Subscribe and Receive exclusive content and updates on your favorite topics

    Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.