ಈಗಿನ ಸುದ್ದಿ

ಬಾಂಗ್ಲದೇಶದಲ್ಲಿ ಸಂಘರ್ಷ: 42 ಸಾವು

Published On :

ಢಾಕಾ: ಇಸ್ಲಾಮಿಕ್ ನಾಯಕನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ಬಾಂಗ್ಲದೇಶದಲ್ಲಿ ಹಿಂಸಾಚಾರ ಉಂಟಾಗಿದ್ದು 42ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಜಮಾತ್-ಇ-ಇಸ್ಲಾಮಿ(ಜೆಐ) ಸಂಘಟನೆಯ ಉಪಾಧ್ಯಕ್ಷ ಹಾಗೂ ಇಸ್ಲಾಮಿಕ್ ನಾಯಕ 73 ವರ್ಷದ ದೆಲವಾರ್ ಹೊಸೇನ್ ಸಯ್ಯದೀ ಅವರಿಗೆ ಅಂತರಾಷ್ಟ್ರೀಯ ಅಪರಾಧ ನ್ಯಾಯಾಮಂಡಳಿ ನಿನ್ನೆ ಮರಣೆ ದಂಡನೆ ಶಿಕ್ಷೆ ವಿಧಿಸಿದೆ.

1971 ಪಾಕಿಸ್ತಾನ ವಿರುದ್ಧ 9ತಿಂಗಳ ಸ್ವಾತಂತ್ರ್ಯ ಯುದ್ಧ ನಡೆಸಿದ ಸಂದರ್ಭದಲ್ಲಿ 20 ಅತ್ಯಾಚಾರ, ಅನೇಕ ಕೊಲೆಗಳ ಪ್ರಕರಣದಲ್ಲಿ ದೆಲ್‌ವಾರ್ ಭಾಗಿಯಾಗಿದ್ದರು. ಈ ಸಂಬಂಧ ಅಂತರಾಷ್ಟ್ರೀಯ ಅಪರಾಧ ನ್ಯಾಯಾಮಂಡಳಿ ವಿಚಾರಣೆ ನಡೆಸಲಾಯಿತು. ನಿನ್ನೆ ನ್ಯಾಯಾಲಯ ದೆಲ್‌ವಾರ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಇದರಿಂದ ರೊಚ್ಚಿಗೆದ್ದ ದೆಲ್‌ವಾರ್ ಬೆಂಬಲಿಗರು ಬಾಂಗ್ಲಾದಲ್ಲಿ ಹಿಂಸಾಚಾರ ನಡೆಸುತ್ತಿದ್ದು, ಅನೇಕ ಜೀವಗಳನ್ನು ಬಲಿತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಪ್ರಾರ್ಥನೆ ನಡೆಸುವ ಸ್ಥಳಗಳಲ್ಲಿ ದೆಲ್‌ವಾರ್ ಸಂಘಟನೆಕಾರರು ದಾಳಿ ನಡೆಸಬಹುದು ಎಂಬ ಹಿನ್ನಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇದರ ನಡುವೆಯೇ ಆತನ ಬೆಂಬಲಿಗರು ಮುಂದುವರೆಸಿದ ಪ್ರತಿಭಟನೆ ಹಿಂಚಾರಕ್ಕೆ ತಿರುಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.