ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ 'ನಿರ್ಭಯಾ' ಶೇ.73 ಅಂಕ ಗಳಿಸಿದ್ದಳು!
ಡೆಹ್ರಾಡೂನ್: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನಂತರ ಸಾವನ್ನಪ್ಪಿದ ಯುವತಿ ನಿರ್ಭಯಾ ಫಿಸಿಯೋಥೆರಪಿ ಪದವಿ ಪರೀಕ್ಷೆಯಲ್ಲಿ ಶೇ.73 ಅಂಕ ಗಳಿಸಿದ್ದಾಳೆ.
ಡಿಸೆಂಬರ್ 16ರಂದು ರಾತ್ರಿ ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿರುವ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಾಗಿದ್ದ 23ರ ಹರೆಯದ ಯುವತಿ 'ನಿರ್ಭಯಾ' ಡಿಸೆಂಬರ್ 29ರಂದು ಸಿಂಗಾಪೂರ್ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಉತ್ತರಾಖಂಡ್ನ ಹೆಮ್ವತಿ ನಂದನ್ ಬಹುಗುಣ ಗರ್ಹ್ವಲ್ ಯುನಿವರ್ಸಿಟಿಯಲ್ಲಿ 'ನಿರ್ಭಯಾ'ಫಿಸಿಯೋಥೆರಪಿ ಪದವಿ ಕೋರ್ಸ್ ಮಾಡುತ್ತಿದ್ದು, ಅಂತಿಮ ವರ್ಷದ ಪದವಿಯಲ್ಲಿ ಈಕೆ ಶೇ. 72.7 ಅಂಕಗಳಿಸಿದ್ದಾಳೆ ಎಂದು ಪ್ರಸ್ತುತ ಯುನಿವರ್ಸಿಟಿ ತಿಳಿಸಿದೆ.
ಈಕೆ ಎಲ್ಲ ವಿಷಯಗಳಲ್ಲೂ ಉತ್ತಮ ಅಂಕ ಗಳಿಸಿದ್ದು ಒಟ್ಟು 1100 ಅಂಕಗಳಲ್ಲಿ 800 ಅಂಕಗಳನ್ನು ಗಳಿಸಿದ್ದಾಳೆ ಎಂದು ಡೆಹ್ರಾಡೂನ್ ವಿದ್ಯಾಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.
ವಿದ್ಯಾಸಂಸ್ಥೆಯ ನಿರ್ದೇಶಕರ ಪ್ರಕಾರ ಈಕೆ ಫಿಸಿಯೋಥೆರಪಿ ಇನ್ ಆರ್ಥೋಪಿಡಿಕ್ಸ್ ವಿಷಯದಲ್ಲಿ 200ರಲ್ಲಿ 124, ಫಿಸಿಯೋಥೆರಪಿ ಇನ್ ನ್ಯೂರೋಲಜಿ 200ರಲ್ಲಿ 147, ಫಿಸಿಯೋಥೆರಪಿ ಇನ್ ಕಾರ್ಡಿಯೋಥೊರಾಸಿಕ್ನಲ್ಲಿ 151, ಫಿಸಿಯೋಥೆರಪಿ ಇನ್ ಜನರಲ್ ಮೆಡಿಸಿನ್ನಲ್ಲಿ 144, ಫಿಸಿಯೋಥೆರಪಿ ಇನ್ ಕ್ಲಿನಿಕಲ್ ಡೆಸರ್ಟೇಷನ್ನಲ್ಲಿ 160, ರಿಸರ್ಚ್ ಮೆಥೊಡೋಲಜಿಯಲ್ಲಿ 100ರಲ್ಲಿ 74 ಅಂಕಗಳನ್ನು ಗಳಿಸಿದ್ದಾಳೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಪದವಿ ಪರೀಕ್ಷೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

