ಸಾಂಸ್ಕೃತಿಕ ಹಾಗು ಸೈನಿಕ ಶಕ್ತಿ ಪ್ರದರ್ಶನ ಮೇಳೈಸಿದ ಗಣರಾಜ್ಯೋತ್ಸವ ಪರೇಡ್
ನವದೆಹಲಿ: 64ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜ್ಪಥ್ನಿಂದ ಕೆಂಪುಕೋಟೆಯವರೆಗೆ ನಡೆದ ಚಿತ್ತಾಕರ್ಷಕ ಪರೇಡ್ನಲ್ಲಿ ಭಾರತದ ಕಲಾ ಸಾಂಸ್ಕೃತಿಕ ಮತ್ತು ಸೈನಿಕ ಶಕ್ತಿ ಪ್ರದರ್ಶನ ಮೇಳೈಸಿತು.
ಗಣರಾಜ್ಯೋತ್ಸವ ಆಚರಣೆಯ ವಿಶೇಷ ಅತಿಥಿಯಾಗಿ ಭೂತಾನದ ರಾಜ ಜಿಗ್ಮೆ ಖೇಸರ್ ನಂಗೇಲ್ ವಾಂಗ್ಚುಕ್ ಅವರು ಭಾಗವಹಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ರಕ್ಷಣಾ ಸಚಿವ ಎ.ಕೆ ಆ್ಯಂಟನಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ರಾಜಕಾರಣಿಗಳು ಹಾಗು ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್, ಎನ್ಸಿಸಿ ಹಾಗು ಸೇನಾ ಪಡೆಯ ಪಥ ಸಂಚಲನದೊಂದಿಗೆ ದೇಶದಾದ್ಯಂತವಿರುವ ಕಲಾ ಸಾಂಸ್ಕೃತಿಕ ಹಾಗು ವಿವಿಧ ಸ್ತಬ್ಧಚಿತ್ರಗಳು ಪಥ ಸಂಚಲನದಲ್ಲಿ ಕಣ್ಮನ ಸೆಳೆದವು.
ರಾಜ್ಪಥ್ನಲ್ಲಿ ನಡೆದ ಈ ಪರೇಡ್ನಲ್ಲಿ 5,500-5,800 ಬ್ಯಾಲೆಸ್ಟಿಕ್ ಅಗ್ನಿ-5 ಕ್ಷಿಪಣಿಯನ್ನು ಪ್ರದರ್ಶಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

