ಈಗಿನ ಸುದ್ದಿ

ಹೆಚ್ಚಾಗಿ ಭ್ರಷ್ಟರು ಒಬಿಸಿ, ಎಸ್‌ಸಿ,ಎಸ್‌ಟಿ ಸಮದಾಯದವರೇ ಆಗಿರುತ್ತಾರೆ: ಆಶೀಶ್ ನಂದಿ

Published On :

ಜೈಪುರ್: ಹೆಚ್ಚಾಗಿ ಭ್ರಷ್ಟರು ಒಬಿಸಿ, ಎಸ್‌ಸಿ, ಎಸ್ಟಿ ಜನಾಂಗದವರೇ ಆಗಿರುತ್ತಾರೆ ಎಂದು ರಾಜಕೀಯ ವಿಮರ್ಶಕ ಆಶಿಶ್ ನಂದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ಜೈಪುರ ಲಿಟರೇಚರ್ ಫೆಸ್ಟ್‌ನಲ್ಲಿ ಮಾತನಾಡಿದ ನಂದಿ ಈ ರೀತಿಯ ಹೇಳಿಕೆ ನೀಡಿದ್ದು, ಇದಕ್ಕೆ ಸಭಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ಫೆಸ್ಟ್‌ವಲ್ಲಿ ತಜ್ಞರ ಚರ್ಚೆಗಳು ನಡೆಯುತ್ತಿದ್ದಾಗ, ಹೆಚ್ಚಿನ ಭ್ರಷ್ಟರು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಜನಾಂಗದವರಿಂದ ಬಂದವರಾಗಿದ್ದಾರೆ ಎಂದು ನಂದಿ ನುಡಿದಿದ್ದರು.

ಆವಾಗಲೇ ತಜ್ಞರ ಗುಂಪಿನಲ್ಲಿದ್ದ ಪತ್ರಕರ್ತ ಅಶುತೋಷ್ ನಂದಿಯವರ ಹೇಳಿಕೆಯನ್ನು ಖಂಡಿಸಿದ್ದು, ಅಲ್ಲಿದ್ದ ಸಭಿಕರು ಕೂಡಾ ಅಶುತೋಶ್ ಪ್ರತಿಭಟನೆಗೆ ದನಿಗೂಡಿಸಿದ್ದಾರೆ.

ಈ ಹೇಳಿಕೆಯನ್ನು ಕೇಳಿ ನಾನು ತಬ್ಬಿಬ್ಬಾಗಿದ್ದೇನೆ. ಬ್ರಾಹ್ಮಣರು ಮತ್ತು ಮೇಲ್ಜಾತಿಯ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಕೆಳ ಜಾತಿಯ ವ್ಯಕ್ತಿಯೊಬ್ಬ ಭ್ರಷ್ಟಾಚಾರ ಮಾಡಿದರೆ ಅದು ದೊಡ್ಡ ಅಪರಾಧವಾಗುತ್ತದೆ. ಈ ಹೇಳಿಕೆ ಸರಿಯಾಗಿಲ್ಲ ಎಂದು ಅಶುತೋಶ್ ಹೇಳಿದ್ದಾರೆ.

ಒಬಿಸಿ, ಎಸ್‌ಸಿ  ಹಾಗು ಎಸ್ಟಿ ಸಮುದಾಯದ ಜನರೇ ಹೆಚ್ಚಾಗಿ ಭ್ರಷ್ಟಾಚಾರ ಮಾಡುತ್ತಾರೆ. ಇದು ಹೀಗೆ ಮುಂದುವರಿಯುತ್ತಲೂ ಇದೆ ಎಂದು ನಂದಿ ಹೇಳಿದ್ದರು.

ತಮ್ಮ ಹೇಳಿಕೆಗೆ ಸಭಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಂದಿಯವರ ಆಮೇಲೆ ಸ್ಪಷ್ಟನೆ ನೀಡಿದ್ದಾರೆ. ಅದೇನೆಂದರೆ ಭ್ರಷ್ಟಾಚಾರ ಮಾಡುತ್ತಿರುವಾಗ ಸಿಕ್ಕಿ ಬೀಳುವುದು ಒಬಿಸಿ, ಎಸ್‌ಸಿ  ಹಾಗು ಎಸ್ಟಿ ಸಮುದಾಯದ ಜನರೇ ಆಗಿದ್ದಾರೆ. ಯಾಕೆಂದರೆ ಅವರಿಗೆ ಇತರ ಮೇಲ್ಜಾತಿಯವರಂತೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಅರ್ಥ ಬರುವ ರೀತಿಯಲ್ಲಿ ತಾನು ಈ ಹೇಳಿಕೆ ನೀಡಿದ್ದೇನೆ ಎಂದು ನಂದಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನೀವು 20 ರು. ಟಿಕೇಟ್‌ನ್ನು ಬ್ಲಾಕ್‌ನಲ್ಲಿ ಮಾರುತ್ತಿದ್ದ ಬಡವನನ್ನು ಹಿಡಿದು ಭ್ರಷ್ಟಾಚಾರ ಮಾಡುತ್ತಿದ್ದಾನೆ ಎಂದು ಆರೋಪಹೊರಿಸಬಹುದು. ಆದರೆ ಶ್ರೀಮಂತರು ಹಲವಾರು ವಿಧದಲ್ಲಿ ಭ್ರಷ್ಟಾಚಾರ ಮಾಡುತ್ತಿರುತ್ತಾರೆ ಎಂದು ನಂದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.