ಈಗಿನ ಸುದ್ದಿ

ಭಾರತೀಯ ಖೈದಿ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ

Published On :

ಲಾಹೋರ್: ಪಾಕಿಸ್ತಾನದ ಜೈಲು ಅಧಿಕಾರಿಗಳಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ಖೈದಿಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಪಾಕಿಸ್ತಾನದ ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.

ಬೆಹುಗಾರಿಕೆ ಅಪರಾಧದ ಮೇಲೆ ಭಾರತದ ಚಂಬಲ್ ಸಿಂಗ್ ಎಂಬುವವರಿಗೆ ಪಾಕಿಸ್ತಾನದ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಪಾಕಿಸ್ತಾನದ ಜೈಲು ಅಧಿಕಾರಿಗಳು ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಅವರು ಜನವರಿ 15ರಂದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ಇತ್ತೀಚೆಗಷ್ಟೇ ಬಿಡುಗಡೆಯಾದ ಲಾಹೋರ್ ಜೈಲಿನಿಂದ ಬಿಡುಗಡೆಯಾದ ತೆಹಸೀನ್ ಖಾನ್ ಅವರು ಚಮಲ್ ಸಿಂಗ್ ಮೇಲೆ ಜೈಲು ಅಧಿಕಾರಿಗಳು ಹಲ್ಲೇ ಮಾಡಿರುವುದನ್ನು ಕಣ್ಣಾರೇ ನೋಡಿದ್ದಾರೆ ಎಂದು ತೆಹಸೀನ್ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದರು.

ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಆಡಳಿತ ಮಂಡಳಿ ಚಮಲ್ ಸಿಂಗ್ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದ್ದಾರೆ.

ಚಮಲ್ ಸಿಂಗ್ ಎಂಬ ಭಾರತೀಯ ಮೂಲದ ಖೈದಿ ಜೈಲಿನಲ್ಲಿ ಬಟ್ಟೆ ಒಗೆಯುತ್ತಿರಬೇಕಾದರೆ ಜೈಲು ಅಧಿಕಾರಿಗಳಿಂದ ಹೊಡೆತ ತಿಂದು ಜಿನ್ಹಾ ಆಸ್ಪತ್ರೆಗೆ ಸೇರಿಸಲಾಯಿತು. ಎರಡು ದಿನಗಳ ನಂತರ ಸಿಂಗ್ ಸಾವನಪ್ಪಿದ್ದಾರೆ. ಅಲ್ಲದೇ, ಚಮಲ್ ಸಿಂಗ್ ಅವರು ಜನವರಿ 15ರಂದು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ ಎಂದು ಭಾರತದ ರಾಯಭಾರ ಕಛೇರಿ ತಿಳಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.