ಈಗಿನ ಸುದ್ದಿ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅವಧಿ ಪೂರೈಸುತ್ತದೆ: ರಾಜ್‌ನಾಥ್ ಸಿಂಗ್

Published On :

ನವದೆಹಲಿ:  ಕರ್ನಾಟಕಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ನ್ನು ಸೋಮವಾರ ಬೆಳಗ್ಗೆಭೇಟಿ ಮಾಡಿದಬಿಜೆಪಿ ರಾಷ್ಟ್ರಾಧ್ಯಕ್ಷರಾಜ್‌ನಾಥ್ ಸಿಂಗ್ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆಯಾವುದೇ ಬೆದರಿಕೆಇಲ್ಲ ಎಂದುಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಶೆಟ್ಟರ್ಅವರನ್ನು ಭೇಟಿ ಮಾಡಿದ ರಾಜ್‌ನಾಥ್ ಸಿಂಗ್ಸುಮಾರು 1ಗಂಟೆಗಳ ಕಾಲಮಾತುಕತೆ ನಡೆಸಿದ್ದಾರೆ. ಮಾಜಿ ಸಿಎಂ ಬಿಎಸ್ಯಡಿಯೂರಪ್ಪರ ನಿಷ್ಠ 13 ಶಾಸಕರು ರಾಜಿನಾಮೆನೀಡಲು ಮುಂದಾಗಿರುವಹಿನ್ನೆಲೆಯಲ್ಲಿ ರಾಜ್‌ನಾಥ್ ಸಿಂಗ್ ಅವರು ಶೆಟ್ಟರ್‌ನ್ನುಭೇಟಿ ಮಾಡಿದ್ದಾರೆ.

ಶೆಟ್ಟರ್ ಜತೆಗೆ ಮಾತುಕತೆನಡೆಸಿದ ನಂತರಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕರ್ನಾಟಕ ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ತಮ್ಮಅವಧಿಯನ್ನು ಪೂರೈಸುತ್ತದೆ. ಶೆಟ್ಟರ್‌ಗೆಈ ಬಗ್ಗೆಯಾವುದೇ ಸಲಹೆಗಳನ್ನುನೀಡಬೇಕಾಗಿಲ್ಲ. ಅವರು ತುಂಬಾ ಜಾಣ ವ್ಯಕ್ತಿಎಂದಿದ್ದಾರೆ.

ಅದೇ ವೇಳೆ ಇದೊಂದುಸೌಜನ್ಯದ ಮಾತುಕತೆಯಾಗಿತ್ತು. ಬಿಜೆಪಿರಾಷ್ಟ್ರಾಧ್ಯಕ್ಷರಾದ ನಂತರ ರಾಜ್‌ನಾಥ್ಅವರು ಕರ್ನಾಟಕಕ್ಕೆಬಂದು ನಾಯಕರನ್ನುಭೇಟಿ ಮಾಡಿದ್ದಾರಷ್ಟೇಎಂದು ಶೆಟ್ಟರ್ಹೇಳಿದ್ದಾರೆ.

 ಆದರೆ, ದಕ್ಷಿಣಭಾರತದಲ್ಲಿ ಮೊದಲ ಬಾರಿ ಅಧಿಕಾರಕ್ಕೇರಿರುವ ತಮ್ಮ ಪಕ್ಷದ ಭಾವೀಕಾರ್ಯಗಳ ಬಗ್ಗೆ  ಇಬ್ಬರುನಾಯಕರು ಮಾತುಕತೆನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಸರ್ಕಾರಕ್ಕೆಭೀತಿಯಿದೆಯೇ? ಎಂದು ಕೇಳಿದಾಗ, ಈವರೆಗೆ ಯಾವುದೇಶಾಸಕರು ರಾಜಿನಾಮೆನೀಡಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ಮಾತ್ರವಲ್ಲದೆತಮ್ಮ ಸರ್ಕಾರಅಧಿಕಾರ ಅವಧಿಪೂರೈಸುವುದಾಗಿ ಸಿಎಂ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.