ಚಿದಂಬರಂ, ಶಿಂಧೆ ವಿರುದ್ಧ ಕೇಸು ದಾಖಲಿಸಿ: ಆಂಧ್ರ ಜಿಲ್ಲಾ ಕೋರ್ಟ್

ನವದೆಹಲಿ/ ಹೈದ್ರಾಬಾದ್: ನೂತನತೆಲಂಗಾಣ ರಾಜ್ಯ ರೂಪಿಸುವುದಾಗಿ ಜನರಿಗೆ ಸುಳ್ಳುಆಶ್ವಾಸನೆ ನೀಡಿದ್ದ ಇಬ್ಬರು ಯುಪಿಎ ಸಚಿವರವಿರುದ್ಧ ಪ್ರಕರಣ ದಾಖಲಿಸುವಂತೆ ಆಂಧ್ರ ಪ್ರದೇಶದಜಿಲ್ಲಾ ನ್ಯಾಯಾಲಯವೊಂದುಪೊಲೀಸರಿಗೆ ಆದೇಶಿಸಿದೆ.
ತೆಲಂಗಾಣ ವಿಷಯದ ಬಗ್ಗೆನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿದುದಕ್ಕಾಗಿ ಮಾಜಿ ಗೃಹ ಸಚಿವ ಪಿ.ಚಿದಂಬರಂ ಮತ್ತು ಸುಶೀಲ್ ಕುಮಾರ್ ಶಿಂಧೆಯವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಂಧ್ರಪ್ರದೇಶದ ಕಿರಿಯ ವಕೀಲರ ಸಂಘಟನೆಯೊಂದು ರಂಗರೆಡ್ಡಿಜಿಲ್ಲಾ ಕೋರ್ಟ್ಗೆಮನವಿ ಸಲ್ಲಿಸಿತ್ತು.
ಈ ಅರ್ಜಿಯ ಬಗ್ಗೆವಿಚಾರಣೆ ನಡೆಸಿದ ಕೋರ್ಟ್ ಶಿಂಧೆ ಮತ್ತುಚಿದಂಬರಂ ವಿರುದ್ಧ ಕೇಸು ದಾಖಲಿಸುವಂತೆ ಸೋಮವಾರಆದೇಶಿಸಿದೆ. ನ್ಯಾಯಾಲಯದ ಆದೇಶದಿಂದ ರಾಜ್ಯ ಹಾಗುಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಗೆ ಭಾರೀಮುಖಭಂಗವುಂಟಾಗಿದೆ.
ತೆಲಂಗಾಣ ರೂಪೀಕರಣದ ಬಗ್ಗೆಸರ್ಕಾರ ಸೂಕ್ತನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದುಆರೋಪಿಸಿ ತೆಲಂಗಾಣ ರಾಷ್ಟ್ರ ಸಮಿತಿ ಆಂಧ್ರಪ್ರದೇಶದಾದ್ಯಂತಪ್ರತಿಭಟನೆ ನಡೆಸುತ್ತಿದ್ದ ವೇಳೆಯೇ ನ್ಯಾಯಾಲಯದ ಈಆದೇಶ ನೀಡಿದೆ.
ತೆಲಂಗಾಣ ಬೆಂಬಲಿತ ಸಂಘಟನೆಗಳುಕೇಂದ್ರ ಸರ್ಕಾರಮೋಸ ಮಾಡಿದೆಎಂದು ಆರೋಪಿಸುತ್ತಿದ್ದು,ಕಾಂಗ್ರೆಸ್ ಶಾಸಕರು, ಸಂಸದರು ಹಾಗು ಸಚಿವರವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ.
ಅದೇ ವೇಳೆ ತಮ್ಮಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ರಾಜ್ಯದಎಲ್ಲ ಕಾಂಗ್ರೆಸ್ಸಂಸದರು ಹಾಗುಸಚಿವರು ರಾಜಿನಾಮೆನೀಡಬೇಕೆಂದು ಟಿಆರ್ಎಸ್ ನಾಯಕ ಕೆ.ತಾರಕರಾಮ ರಾವ್ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


