ದೆಹಲಿ ಗ್ಯಾಂಗ್ ರೇಪ್ ಪ್ರಕರಣದ 6ನೇ ಆರೋಪಿ ಬಾಲಾಪರಾಧಿ
ನವದೆಹಲಿ: ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 6ನೇ ಆರೋಪಿ ಅಪ್ರಾಪ್ತ ಎಂದು ಬಾಲಾಪರಾಧಿ ನ್ಯಾಯಮಂಡಳಿ ಹೇಳಿದೆ.
ಡಿ.16ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿನ 6ನೇ ಆರೋಪಿಯ ವಯಸ್ಸು ಪರೀಕ್ಷೆ ಮಾಡುವ ಸಲುವಾಗಿ ಇದೀಗ ಮೂಳೆ ಪರೀಕ್ಷೆಗೊಳಪಡಿಸಲಾಗುವುದು.
ಪ್ರಸ್ತುತ ಪ್ರಕರಣದಲ್ಲಿ ಅತೀ ಕ್ರೂರವಾಗಿ ವರ್ತಿಸಿದ್ದ ಈ ಆರೋಪಿ, ತಾನು ಅಪ್ರಾಪ್ತ ಎಂದು ಸಾಬೀತು ಪಡಿಸಲು ತನ್ನ ಶಾಲಾ ದಾಖಲಾತಿಗಳನ್ನು ಬಾಲಾಪರಾಧಿ ನ್ಯಾಯ ಮಂಡಳಿಗೆ ಸಲ್ಲಿಸಿದ್ದನು ಎಂದು ಬಲ್ಲಮೂಲಗಳು ಹೇಳಿವೆ.
ಅದೇ ವೇಳೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆತನ ಶಾಲಾ ಪ್ರಾಂಶುಪಾಲರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಶಾಲಾ ದಾಖಲಾತಿಯ ಪ್ರಕಾರ 6ನೇ ಆರೋಪಿಯ ಜನ್ಮದಿನಾಂಕ ಜೂನ್ 4, 1995. ಅಂದರೆ ಈಗ ಆತನ ವಯಸ್ಸು 17 ವರ್ಷ, 6 ತಿಂಗಳು, 11 ದಿನ. ಆದುದರಿಂದ ಆತ ಅಪ್ರಾಪ್ತ ಎಂದು ಮಂಡಳಿ ಘೋಷಿಸಿದೆ.
ಒಂದು ವೇಳೆ ವೈದ್ಯಕೀಯ ಪರೀಕ್ಷೆ ಮೂಲಕ ಆತನ ವಯಸ್ಸು ನಿರ್ಣಯ ಮಾಡಬೇಕೆಂದು ಸರ್ಕಾರ ಆದೇಶಿಸಿದರೆ, ಆತನನ್ನು ಮೂಳೆ ಎಕ್ಸ್ರೇ ಮತ್ತು ಡೆಂಟಲ್ ಟೆಸ್ಟ್ಗೆ ಒಳಪಡಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ.
ಈತ ಪ್ರಸ್ತುತ ಪ್ರಕರಣದಲ್ಲಿ ಆರೋಪಿಯಾಗಿದ್ದರೂ, ಬಾಲಾಪರಾಧಿ ಎಂದು ಘೋಷಿಸಿದ ಕಾರಣ ಈತನಿಗೆ ಗರಿಷ್ಠ ಅಂದರೆ 3 ವರ್ಷ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

