ಅಫ್ಜಲ್ಗುರು ಪ್ರಕರಣ: ಆರ್ಟಿಐ ಅರ್ಜಿ ತಿರಸ್ಕಾರ
ಲಖನೌ: ಸಂಸತ್ ಮೇಲಿನ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ಗುರುವಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್ಟಿಐ) ಮಾಹಿತಿ ನೀಡಲು ತಿಹಾರ್ ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುವನ್ನು ತಿಹಾರ್ ಜೈಲಿನಲ್ಲಿ ನೇಣು ಹಾಕಲಾಯಿತು. ಈ ಸಂಬಂಧ ಮಾಹಿತಿ ನೀಡುವಂತೆ ಕೋರಿ ಆರ್ಟಿಐ ಕಾರ್ಯಕರ್ತೆ ಊರ್ವಷಿ ಶರ್ಮಾ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಯಿಸಿರುವ ಜೈಲು ಅಧಿಕಾರಿಗಳು, ಆರ್ಟಿಐಯಡಿ ಅಫ್ಜಲ್ ಗುರು ಗಲ್ಲು ವಿಧಿಸಿದ ಬಗ್ಗೆ ಮಾಹಿತಿ ನೀಡುವುದರಿಂದ ದೇಶದ ಐಕ್ಯತೆ ಹಾಗೂ ಭದ್ರತೆ, ವಿಜ್ಞಾನ ಅಥವಾ ಆರ್ಥಿಕ ಬೆಳವಣಿಗೆ ಸೇರಿದಂತೆ ನೆರೆ ದೇಶಗಳೊಂದಿಗಿರುವ ಸಂಬಂಧಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಜಲ್ ಗುರು ವಿರುದ್ಧ ನೀಡಿದ್ದ ಬ್ಲಾಕ್ ವಾರೆಂಟ್, ಗೃಹ ಇಲಾಖೆಯಿಂದ ಜೈಲು ಅಧಿಕಾರಿಗಳಿಗೆ ಬಂದಂತ ಪತ್ರಗಳು, ಕ್ಷಮಾಧಾನ ಅರ್ಜಿ ಸಲ್ಲಿಸಿದ ಪತ್ರಗಳು ಸೇರಿದಂತೆ ಜೈಲಿನಲ್ಲಿ ಆತನಿಗಾಗಿ ಮಾಡಿದ ಖರ್ಚಿನ ಬಗ್ಗೆ ಮಾಹಿತಿ ನೀಡುವುದರಿಂದ ಭಾರತ ಮತ್ತು ವಿದೇಶಗಳ ನಡುವೆ ಇರುವ ಸಂಬಂಧಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಶರ್ಮಾ ಅವರು ಜೈಲು ಅಧಿಕಾರಿಗಳಿಂದ ರವಾನೆಯಾದ ಪತ್ರಗಳ ಪ್ರತಿಯನ್ನು ಹೊಂದಿದ್ದು, ಮತ್ತಷ್ಟು ದಾಖಲೆಗಳ ಪ್ರತಿಯನ್ನು ನೀಡುವಂತೆ ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
ಅಫ್ಜಲ್ ಗುರು ಸಮಾಧಿ ಮಾಡಿರುವ ಜಾಗ, ನೇಣಿಗೆ ಹಾಕುವ ಸಂದರ್ಭದಲ್ಲಿ ಇದ್ದ ಅಧಿಕಾರಿಗಳ ಹೆಸರುಗಳು, ಭದ್ರತಾ ದೃಷ್ಟಿಯಿಂದ ತೆಗೆಯಲಾಗಿರುವಂತಹ ಛಾಯಚಿತ್ರಗಳ ಪ್ರತಿಯನ್ನು ನೀಡುವಂತೆ ಅವರು ಕೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

