ಈಗಿನ ಸುದ್ದಿ

ಪೂಜಾರ್ ದ್ವಿಶತಕ, ನಡೆಯಲಿಲ್ಲ ದೇವರ ಆಟ

ಪೂಜಾರ್ ದ್ವಿಶತಕ, ನಡೆಯಲಿಲ್ಲ ದೇವರ ಆಟ
Published On :

ಹೈದರಾಬಾದ್: ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್‌ನ ಮೂರನೇ ದಿನವಾದ ಸೋಮವಾರ ಕಾಂಗರುಗಳ ವಿರುದ್ಧ ಚೇತೇಶ್ವರ್ ಪೂಜಾರ್ ಅವರು ಭರ್ಜರಿ ದ್ವಿಶತಕ(204) ಬಾರಿಸಿದ್ದಾರೆ.

ಚೇತೇಶ್ವರ್ ಹಾಗೂ ಮುರಳಿ ವಿಜಯ್ ಅವರ ಭರ್ಜರಿ ಜೊತೆಯಾಟ ಕಂಡ ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 460 ರನ್‌ಗಳಿಸಿದೆ. ಚೇತೇಶ್ವರ್ ಅವರ ನಂತರ ಬಂದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಕೇವಲ 7 ರನ್ ಗಳಿಸಿ ಔಟಾದರು.

ಭಾರತ ನಿನ್ನೆ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ದಿನಾಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 311ರನ್ ಪೇರಿಸಿತ್ತು. ಆರಂಭಿಕ ಮುರಳಿ ವಿಜಯ್ ಹಾಗೂ ಮೂರನೇ ಕ್ರಮಾಂಕದ ಚೇತೇಶ್ವರ್ ಪೂಜಾರ್ ಇಬ್ಬರೂ 294ರನ್‌ಗಳ ಜೊತೆಯಾಟವಾಡಿದ್ದರು. ಇಂದು ಮತ್ತೆ ಆಟ ಮುಂದೂವರೆಸಿದ ಈ ಇಬ್ಬರೂ 345 ರನ್‌ಗಳ ಜೊತೆಯಾಟ ದಾಖಲಿಸಿದರು. ಪೂಜಾರ್ 341 ಎಸೆತದಲ್ಲಿ 204ರನ್ ಸಿಡಿಸಿ, ಪ್ಯಾಟಿನ್‌ಸನ್‌ಗೆ ವಿಕೆಟ್ ಒಪ್ಪಿಸಿದರು. ಇದಕ್ಕು ಮುನ್ನ ಮುರಳಿ ವಿಜಯ್ ಅವರು ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಕೋವನ್‌ಗೆ ಕ್ಯಾಚಿತ್ತು ಔಟಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.