ಭಾರತದ ಉಪೇಕ್ಷೆ ಬೇಡ: ಇಟೆಲಿಗೆ ಸೋನಿಯಾ ತಾಕೀತು
ನವದೆಹಲಿ: ಇಟೆಲಿಯ ನಾವಿಕರ ವಾಪಸಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟೆಲಿ ವಿರುದ್ಧ ಕಿಡಿ ಕಾರಿದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತದ ಉಪೇಕ್ಷೆ ಬೇಡ ಎಂದು ಹೇಳಿದ್ದಾರೆ.
ಇಟೆಲಿಯ ಇಬ್ಬರು ನಾವಿಕರ ವಾಪಸಾತಿ ವಿಷಯದಲ್ಲಿ ಮಾತಿಗೆ ತಪ್ಪಿರುವ ಇಟೆಲಿ ರಾಯಭಾರಿ ಡೇನಿಯಲ್ ಮಾನ್ಸಿನಿ ವಿರುದ್ಧ ಸೋಮವಾರ ಸುಪ್ರೀಂಕೋರ್ಟ್ನ ನ್ಯಾಯಪೀಠ ಕೆಂಡಾಮಂಡಲವಾಗಿತ್ತು. ಸುಪ್ರೀಂ ಕೋರ್ಟ್ ಮಾನ್ಸಿನಿ ಅವರಲ್ಲಿ ನಿಮಗೆ ಇಲ್ಲಿ ಯಾವುದೇ ರಾಜತಾಂತ್ರಿಕ ರಕ್ಷಣೆ ಇಲ್ಲ. ಏಪ್ರಿಲ್2ರ ವರೆಗೆ ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಹೋಗಬೇಡಿ ಎಂದು ಸೂಚನೆ ನೀಡಿತ್ತು.
ಸುಪ್ರೀಂಕೋರ್ಟ್ನ ಈ ಸೂಚನೆಯನ್ನು ಖಂಡಿಸಿದ ಇಟೆಲಿ, ಭಾರತ ಇಟೆಲಿ ರಾಯಭಾರಿಗೆ ರಾಜತಾಂತ್ರಿಕ ರಕ್ಷಣೆ ನೀಡಲ್ಲ ಎನ್ನುವ ಮೂಲಕ ರಾಜತಾಂತ್ರಿಕ ಒಡಂಬಡಿಕೆಯನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದೆ.
ಇಟೆಲಿಯ ನಾವಿಕರು ಭಾರತಕ್ಕೆ ಮರಳುವ ಬಗ್ಗೆ ಇಟೆಲಿಯ ರಾಯಭಾರಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಇದೀಗ ಆ ಮುಚ್ಚಳಿಕೆ ಮರಿದು ಹೊಸ ವಾದ ಮಂಡಿಸುತ್ತಿದ್ದಾರೆ. ನಾವು ನಿಮ್ಮ ಮಾತನ್ನು ಆಲಿಸಲು ಸಿದ್ಧರಿಲ್ಲ ಎಂದು ಸುಪ್ರೀಂ ಕೋರ್ಟ್ ಇಟೆಲಿ ವಿರುದ್ಧ ಹರಿ ಹಾಯ್ದಿತ್ತು.
ಮಾನ್ಸಿನಿ ಮತ್ತು ಇಟಲಿ ಸರ್ಕಾರದ ಪರವಾಗಿ ಸೋಮವಾರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಇಟೆಲಿ ರಾಯಭಾರಿಗೆ ಬಂಧನದಿಂದ ವಿನಾಯ್ತಿ ಸೌಲಭ್ಯವಿರುವ ರಾಜತಾಂತ್ರಿಕ ರಕ್ಷಣೆ ಬಗ್ಗೆ ನ್ಯಾಯಪೀಠದ ಗಮನ ಸೆಳೆಯಲು ಮುಂದಾಗಿದ್ದರು.
ಈ ವೇಳೆ ಆಕ್ರೋಶಗೊಂಡ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೇರ್ ಅವರನ್ನೊಳಗೊಂಡ ನ್ಯಾಯಪೀಠ ರೋಹ್ಟಗಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

