ಈಗಿನ ಸುದ್ದಿ

'ಮಾನ ರಕ್ಷಣೆ'ಗಾಗಿ ಹೋಟೆಲ್ ಕಿಟಕಿಯಿಂದ ನೆಗೆದ ಯುವತಿ

Published On :

ಆಗ್ರಾ: ತನ್ನ ಮಾನ ರಕ್ಷಣೆಗಾಗಿ ಬ್ರಿಟಿಷ್ ಯುವತಿಯೊಬ್ಬಳು ಹೋಟೆಲೊಂದರ ಕಿಟಿಕಿಯಿಂದ ನೆಗೆದ ಘಟನೆ ವರದಿಯಾಗಿದೆ. ಆಗ್ರಾದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಹೋಟೆಲ್ನಲ್ಲಿ ತಂಗಿದ್ದ ಬ್ರಿಟಿಷ್ ಯುವತಿ ಮೇಲೆ ಮಂಗಳವಾರ ಅತ್ಯಾಚಾರ ಯತ್ನ ನಡೆದಿದೆ. ಈ ವೇಳೆ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡ ಯುವತಿ ಹೋಟೆಲ್ನ ಎರಡನೇ ಮಹಡಿಯಿಂದ ನೆಗೆದಿದ್ದಾಳೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ವಿದೇಶಿ ಯುವತಿ ಹೋಟೆಲ್ನ ಎರಡನೇ ಮಹಡಿಯಲ್ಲಿದ್ದ ರೂಂ ನಿಂದ ಕಿಟಕಿ ಮೂಲಕ ಜಿಗಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಏತನ್ಮಧ್ಯೆ, ತನ್ನ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಮಾನ ರಕ್ಷಣೆಗಾಗಿ ಕಿಟಕಿಯಿಂದ ನೆಗೆದಿದ್ದೇನೆ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಮಾಲೀಕನನ್ನು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಸ್ವಿಸ್ ಮಹಿಳೆಯೊಬ್ಬಳು ಪತಿಯ ಮುಂದೆಯೇ ಅತ್ಯಾಚಾರಕ್ಕೀಡಾದ್ದು, ಆ ಘಟನೆಯ ಬಿಸಿ ಆರುವ ಮುನ್ನವೇ ಇಂಥಾದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಭಾರತದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂಬ ಮಾತಿಗೆ ಪುಷ್ಠಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.