ಈಗಿನ ಸುದ್ದಿ

ಹೈಸ್ಫೋಟದ ರುವಾರಿಗಳ ಮಾಹಿತಿ ನೀಡಿದರೆ 10 ಲಕ್ಷ ರು. ಬಹುಮಾನ

Published On :

ಹೈದ್ರಾಬಾದ್: ಫೆ.21ರಂದು ಹೈದ್ರಾಬಾದ್ನಲ್ಲಿ ನಡೆದ ಬಾಂಬ್ಸ್ಫೋಟದ ರುವಾರಿಗಳ ಬಗ್ಗೆ  ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 10 ಲಕ್ಷ ರು. ಬಹುಮಾನ ಘೋಷಿಸಿದೆ.

ಹೈದ್ರಾಬಾದ್ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದೆ.

ಒಂದು ವೇಳೆ ಯಾರಿಗಾದರೂ ಬಾಂಬ್ ಸ್ಫೋಟದ ರುವಾರಿಗಳ ಬಗ್ಗೆ ಮಾಹಿತಿ ಇದ್ದರೆ, ಅವರು 040-2776 4488, 040-4005 8500 ಸಂಖ್ಯೆಗೆ ಫೋನ್ ಮಾಡಬಹುದು, dilsukhnagartwinblasts@gmail.comಗೆ ಇಮೇಲ್ ಕಳುಹಿಸಬಹುದು ಇಲ್ಲವೇ ಎನ್ಐಎಗೆ ಅಂಚೆ ಮೂಲಕವೂ ತಿಳಿಸಬಹುದಾಗಿದೆ.

ಹೈದ್ರಾಬಾದ್ನ ದಿಲ್ಸುಖ್ ನಗರದಲ್ಲಿ ಸಂಭವಿಸಿದ  ಬಾಂಬ್ ಸ್ಫೋಟದಲ್ಲಿ 17 ಮಂದಿ ಸಾವಿಗೀಡಾಗಿದ್ದು, 116 ಮಂದಿಗೆ ಗಾಯಗಳಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.