ಈಗಿನ ಸುದ್ದಿ

ಅತ್ಯಾಚಾರ ತಡೆ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ

Published On :

ನವದೆಹಲಿ: ಲೋಕಸಭೆಯಲ್ಲಿ ಅತ್ಯಾಚಾರ ತಡೆ ಮಸೂದೆ ಅಂಗೀಕಾರವಾದ ಎರಡೇ ದಿನಗಳಲ್ಲಿ ಪ್ರಸ್ತುತ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ ಲಭಿಸಿದೆ. ಈ ಮಸೂದೆಯಲ್ಲಿ ಸಮ್ಮತಿ ಸೆಕ್ಸ್ ವಯೋವುತಿ 18ಕ್ಕೆ ನಿಗದಿಯಾಗಿದ್ದು, ಹುಡುಗಿಯರನ್ನು ಹಿಂಬಾಲಿಸಿದರೆ, ಲೈಂಗಿಕ ದರ್ಶನ ತೃಪ್ತಿ ಮೊದಲಾದ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಭಾರತದಲ್ಲಿ ಅತ್ಯಾಚಾರ ತಡೆ ನಿಯಮವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಮೇಲ್ಮನೆಯಲ್ಲಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಈ ಮಸೂದೆಯನ್ನು ಅಂಗೀಕರಿಸಿದ್ದಾರೆ.

ಅತ್ಯಾಚಾರ ವಿರೋಧಿ ಸುಗ್ರೀವಾಜ್ಞೆಯ ಬದಲಾಗಿ ಜಾರಿಯಾಗಲಿರುವ ಅತ್ಯಾಚಾರ ಮಸೂದೆಗೆ ಕಮ್ಯೂನಿಸ್ಟ್ ಪಕ್ಷದ ನಾಯಕ ಡಿ.ರಾಜಾ ಅವರು ವಿರೋಧ ವ್ಯಕ್ತ ಪಡಿಸಿ ನಿಲುವಳಿ ಮಂಡಿಸಿದ್ದು, ಸಂಸತ್ ಅದನ್ನು ತಿರಸಸ್ಕರಿಸಿದೆ.

ಈ ಮಸೂದೆ ಅಂಗೀಕಾರಕ್ಕೆ ಮತದಾನ ಮಾಡುವಾಗ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಅಲ್ಲಿ ಉಪಸ್ಥಿತರಿದ್ದರು.

ರಾಜ್ಯಸಭೆಯಲ್ಲಿ ಮಹಿಳೆಯರ ರಕ್ಷಣೆಗಾಗಿ, ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಪಕ್ಷಬೇಧ ಮರೆತು ರಾಜ್ಯಸಭಾ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದರು.

ಅತ್ಯಾಚಾರ ತಡೆ ಮಸೂದೆಯ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ಮಾಯಾಸಿಂಗ್ , ಅತ್ಯಾಚಾರ ಪ್ರಕರಣದಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಭಾಗಿಯಾಗಿದ್ದರೆ ಅವರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಒಬ್ಬ ಬಾಲಾಪರಾಧಿ ಅಂಥದೊದ್ದು ಕೃತ್ಯವೆಸಗಲು ಬೌದ್ಧಿಕವಾಗಿ ಸಮರ್ಥನಾಗಿದ್ದರೆ ಅವನನ್ನು ಬಾಲಾಪರಾಧಿ ಎಂದು ಪರಿಗಣಿಸಲೇ ಬಾರದು. 16 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ಓರ್ವ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆಗೈದರೆ ಆತನಿಗೆ ಮರಣದಂಡನೆ ವಿಧಿಸಬೇಕು ಎಂದು ಮಾಯಾ ಹೇಳಿದ್ದಾರೆ.

ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನ್ನು ಬಾಲಾಪರಾಧಿಯೆಂದು ಘೋಷಿಸಿದ್ದು, ಈತನ ಬಗ್ಗೆ ಬಾಲಾಪರಾಧ ನ್ಯಾಯಾಲಯ ಮಂಡಳಿಯಲ್ಲಿ ವಿಚಾರಣೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.