ಈಗಿನ ಸುದ್ದಿ

ರಾಜ್ಯಸಭೆಯಲ್ಲಿ ಕೋಲಾಹಲ, ಸಭಾಧ್ಯಕ್ಷರ ಮೈಕ್ ಕಿತ್ತ ಸದಸ್ಯರು

Published On :

ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಶ್ರೀಲಂಕಾ ವಿರುದ್ಧ ಅಮೆರಿಕ ಮಂಡಿಸಿದ ನಿರ್ಣಯದ ಪರ ಭಾರತ ಮತ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಡಿಎಂಕೆ ಮತ್ತು ಎಐಎಡಿಎಂಕೆ ಸಂಸದರು ರಾಜ್ಯಸಭೆಯಲ್ಲಿ ಗದ್ದಲವುಂಟು ಮಾಡಿದ್ದಾರೆ.

ಶುಕ್ರವಾರ ರಾಜ್ಯಸಭೆಯಲ್ಲಿ ಕಲಾಪ ಆರಂಭವಾದಾಗ ಡಿಎಂಕೆ ಮತ್ತು ಎಐಎಡಿಎಂಕೆ ಸಂಸದರು ಘೋಷಣೆ ಕೂಗಿ ಸದನದ ಅಂಗಳಕ್ಕಿಳಿದು, ಸಭಾಧ್ಯಕ್ಷರ ಮೈಕ್ ಕಿತ್ತ ಘಟನೆ ನಡೆದಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಶ್ರೀಲಂಕಾ ವಿರುದ್ಧ ಅಮೆರಿಕ ಮಂಡಿಸಿದ ನಿರ್ಣಯದ ಪರ ಭಾರತ ಮತ ಹಾಕುವ ಮೂಲಕ ತಮಿಳರ ರಕ್ಷಣೆಗೆ ಭಾರತ ನೆರವಾಗಿಲ್ಲ ಎಂದು ಸಂಸದರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಲಾಪಕ್ಕೆ ಸಭಾಧ್ಯಕ್ಷ ಹಮೀದ್ ಅನ್ಸಾರಿ ಆಗಮಿಸಿದ ಕೂಡಲೇ ವಿ. ಮೈತ್ರೇಯನ್ ಅವರ ನೇತೃತ್ವದಲ್ಲಿ ಎಐಎಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಸದರು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರ ಪುತ್ರನನ್ನು ಶ್ರೀಲಂಕಾ ಸೇನೆ ಹತ್ಯೆಗೈದಿರುವ ಫೋಟೋವನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಸಂಸದರ ಗದ್ದಲ ತೀವ್ರವಾಗುತ್ತಿದ್ದಂತೆ ಕಲಾಪವನ್ನು ಮಧ್ಯಾಹ್ನದವರಗೆ ಮುಂದೂಡಲಾಯಿತು.

ಮಧ್ಯಾಹ್ನ  2.30ಕ್ಕೆ ಕಲಾಪ ಪುನರಾರಂಭವಾದಾಗಲೂ ಸಂಸದರು ಗದ್ದಲ ಮುಂದುವರಿಸಿದ್ದಾರೆ. ವಿದೇಶಿ ಸಚಿವ ಸಲ್ಮಾನ್ ಖುರ್ಷಿದ್ ಮಾತು ಆರಂಭಿಸಿದಾಗ ಘೋಷಣೆ ಕೂಗುವ ಮೂಲಕ ಸಂಸದರು ಅಡ್ಡಿಪಡಿಸಿದರು. ಆ ವೇಳೆ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಗದ್ದಲವುಂಟು ಮಾಡದಂತೆ ಬಿನ್ನಹ ಮಾಡಿದರೂ ಸಂಸದರು ಕಿವಿಗೊಡಲಿಲ್ಲ. ಅದೇ ವೇಳೆ ಸಂಸದರು ಸ್ಪೀಕರ್ ಬಳಿ ತೆರಳಿ ಅವರ ಮೈಕ್ ಕಿತ್ತೆಸೆದಿದ್ದಾರೆ.

ಸಂಸದರ ಗದ್ದಲ ಮಿತಿ ಮೀರಿದ್ದರಿಂದ ಕಲಾಪವನ್ನು ಸ್ಥಗಿತಗೊಳಿಸಲಾಗಿದ್ದು, ಮುಂದಿನ ಸಭೆ ಏಪ್ರಿಲ್ 22ಕ್ಕೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.