ಈಗಿನ ಸುದ್ದಿ

ಶಂಕಿತ ಹಿಜ್ಬುಲ್ ಉಗ್ರನ ಸೆರೆ

Published On :

ನವದೆಹಲಿ: ಉತ್ತರ ಪ್ರದೇಶದಲ್ಲಿ ಉಗ್ರ ಸಂಘಟನೆಯಾದ ಹಿಬ್ಜುಲ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ  ವೇಳೆ ಲಿಯಾಖತ್ ಷಾ ಎಂಬ ಉಗ್ರನನ್ನು ಪೊಲೀಸರು ಗೋರಖ್‌ಪುರ್‌ನಲ್ಲಿ ಎರಡು ದಿನಗಳ ಹಿಂದೆ ಬಂಧಿಸಿದ್ದರು.

ಈತ ಹೋಳಿಹಬ್ಬದ ವೇಳೆ ದೆಹಲಿಯಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದನು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಈತನ ಹೇಳಿಕೆಯ ಮೇರೆಗೆ ದೆಹಲಿ ಪೊಲೀಸರ ವಿಶೇಷ ಪಡೆ ದೆಹಲಿಯ ಜಮಾ ಮಸೀದಿಯ ಪಕ್ಕದಲ್ಲಿರುವ ಅತಿಥಿ ಗೃಹಕ್ಕೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಎಕೆ 47, ಹ್ಯಾಂಡ್ ಗ್ರೆನೇಡ್‌ಗಳು, 60 ಸ್ಫೋಟಕಗಳು  ಹಾಗು ಜಮಾ ಮಸೀದಿ ಪ್ರದೇಶದ ಕೆಲವೊಂದು ಭೂಪಟಗಳು ಪತ್ತೆಯಾಗಿವೆ.

ಶಂಕಿತ ಉಗ್ರ ಲಿಯಾಖತ್ ಷಾ (47) ಕಾಶ್ಮೀರದ ಸೋಪೋರ್ ನಿವಾಸಿಯಾಗಿದ್ದಾನೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಈತ ಪಾಕಿಸ್ತಾನದಿಂದ ಕಾಠ್ಮಂಡು ಮೂಲಕ ಗೋರಖ್‌ಪುರಕ್ಕೆ ಬಂದಿದ್ದು, ಅಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಲಿಯಾಖತ್ ಷಾನನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೆ 15 ದಿನಗಳ ಪೊಲೀಸ್ ಬಂಧನ ವಿಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.