ಈಗಿನ ಸುದ್ದಿ

ಸಾಹಿತಿ ಬೆಳಗೆರೆ ಕೃಷ್ಣ ಶಾಸ್ತ್ರಿ ವಿಧಿವಶ

ಸಾಹಿತಿ ಬೆಳಗೆರೆ ಕೃಷ್ಣ ಶಾಸ್ತ್ರಿ ವಿಧಿವಶ
Published On :

ಬೆಂಗಳೂರು: ಹಿರಿಯ ಸಾಹಿತಿ ಹಾಗು ಸಮಾಜ ಸೇವಕ ಬೆಳಗೆರೆ ಕೃಷ್ಣ ಶಾಸ್ತ್ರಿ (98) ಶನಿವಾರ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶಾಸ್ತ್ರಿ ಕೊನೆಯುಸಿರೆಳೆದಿದ್ದು, ಅಂತ್ಯಕ್ರಿಯೆ ಭಾನುವಾರ ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೋಕ್ಷಗುಂಡಂ ಅನ್ನಪೂರ್ಣಮ್ಮ ಮತ್ತು  ಅಪ್ಪ ಚಂದ್ರಶೇಖರ ಶಾಸ್ತ್ರಿಗಳ ಪುತ್ರರಾದ ಕೃಷ್ಣ ಶಾಸ್ತ್ರಿಯವರ ಕುಟುಂಬವೇ ಸಾಹಿತ್ಯ ಅಭಿರುಚಿಯುಳ್ಳದ್ದಾಗಿದೆ.

ಇವರು ರಚಿಸಿದ 'ಸಾಹಿತಿಗಳ ಸ್ಮೃತಿ' ಕೃತಿಯು ನಾಟಕ, ಕವನ ಸಂಕಲನ, ಸಾಹಿತ್ಯ ಲೋಕದ ದಿಗ್ಗಜರ ಒಡನಾಟದ ಸುಮಧುರ ಘಳಿಗೆಯನ್ನು ಹೊಂದಿದೆ. 'ಯೇಗ್ದಾಗೆಲ್ಲಾ ಐತೆ' ಇವರ ಅಪರೂಪದ ಕೃತಿ.

ಬೆಳಗೆರೆಯಲ್ಲಿ ಶಾಲೆ ನಿರ್ಮಿಸಿ, ತಮ್ಮ ಜಮೀನಿನ ಫಸಲಿನಿಂದ 200 ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಒದಗಿಸಿದ ಹೆಗ್ಗಳಿಕೆ ಶಾಸ್ತ್ರಿಗಳದ್ದು.

ಅಧ್ಯಾಪಕ ವೃತ್ತಿಯಲ್ಲಿರುವಾಗ ರಾಜ್ಯ ಮತ್ತು ಕೇಂದ್ರದ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿ ಇವರಿಗೆ ಲಭಿಸಿದೆ. ಅವರು ರಚಿಸಿದ 'ಹಳ್ಳಿ ಚಿತ್ರ' ನಾಟಕಕ್ಕೆ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಅದೇ ವೇಳೆ ಕರ್ನಾಟಕ ಸರ್ಕಾರ ಇವರ ಅಮೂಲ್ಯ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.