ಬೆಂಗಳೂರಿನಲ್ಲಿ ಅಗ್ನಿ ದುರಂತ; 6 ಮಂದಿ ಸಜೀವ ದಹನ

ಬೆಂಗಳೂರು: ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ನಲ್ಲಿರುವ ಎಸ್. ಆರ್ ಸೀಟಿಂಗ್ ಸಿಸ್ಟಂ ಗೋದಾಮಿನಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, 6 ಮಂದಿ ಸಜೀವ ದಹನವಾಗಿದ್ದಾರೆ.
ಶ್ರೀ ಭೈರವೇಶ್ವರ ಟಿಂಬರ್ ಯಾರ್ಡ್ ಪಕ್ಕದಲ್ಲಿರುವ ಎಸ್.ಆರ್ ಸೀಟಿಂಗ್ ಸಿಸ್ಟಂ ಐಷಾರಾಮಿ ಆಸನ ತಯಾರಿಸುವ ಕಾರ್ಖಾನೆಯಾಗಿದೆ.
ಇಲ್ಲಿ 7 ಮಂದಿ ಕಾರ್ಮಿಕರು ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದು ಬೆಳಗ್ಗೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಕಾರ್ಖಾನೆಯಿಂದ ಹೊಗೆ ಬರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.
ಈ ಏಳು ಮಂದಿಯಲ್ಲಿ ಓರ್ವ ಬೆಳಗ್ಗೆ ಎದ್ದು ಟೀ ಕುಡಿಯಲು ಹೊರಗೆ ಹೋಗಿದ್ದನು. ಇನ್ನುಳಿದ ಆರು ಮಂದಿ ನಿದ್ದೆಯಲ್ಲಿದ್ದು, ಅವಗಢದಲ್ಲಿ ಸಜೀವ ದಹನವಾಗಿದ್ದಾರೆ.
ಬೆಳಗ್ಗೆ 9 ಗಂಟೆಯ ವೇಳೆಗೆ ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕದಳದವರು ಆಗಮಿಸಿದ್ದು, ಇದೀಗ ಬೆಂಕಿ ನಂದಿಸಲಾಗಿದೆ.
ಈ ಅವಘಡದಲ್ಲಿ ಸಾವನ್ನಪ್ಪಿದ 6 ಮಂದಿಯನ್ನು ತಾಲಿಬ್, ಘಾಜಿ, ಉಸ್ಮಾನ್, ಶೋಯಬ್, ಸರ್ಫರೋಜ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 22-28 ನಡುವಿನ
ವಯಸ್ಸಿನವರಾಗಿದ್ದಾರೆ. ಅದೇ ವೇಳೆ ನದೀಮ್ ಎಂಬ ಕಾರ್ಮಿಕ ನಾಪತ್ತೆಯಾಗಿದ್ದಾನೆ.
ಅಗ್ನಿಶಾಮಕದಳದವರು ಈಗಾಗಲೇ 5 ಶವಗಳನ್ನು ಹೊರ ತೆಗೆದಿದ್ದಾರೆ.
ಅವಗಢ ಸಂಭವಿಸಿದ ವೇಳೆ ಗೋದಾಮಿ ಷಟರ್ ಹೊರಗಿನಿಂದ ಲಾಕ್ ಮಾಡಲಾಗಿತ್ತು. ಈ ಕಾರಣದಿಂದಾಗಿ ಗೋದಾಮಿನ ಒಳಗಿದ್ದ ಕಾರ್ಮಿಕರು ಉಸಿರುಗಟ್ಟಿ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ, ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣ ಏನೆಂಬುದು ತಿಳಿದು ಬರಲಿದೆ ಎಂದು ಅಗ್ನಿಶಾಮಕ ದಳದ ಐಜಿಪಿ ಶಿವಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


