ಈಗಿನ ಸುದ್ದಿ

ಡಿಎಂಕೆ ಕಾರ್ಯಕಾರಣಿ ಸಭೆಗೆ ಅಳಗಿರಿ ಗೈರು

ಡಿಎಂಕೆ ಕಾರ್ಯಕಾರಣಿ ಸಭೆಗೆ ಅಳಗಿರಿ ಗೈರು
Published On :

ಚೆನ್ನೈ: ಶ್ರೀಲಂಕಾ ತಮಿಳರ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ಯುಪಿಎ ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸುವ ಸಂಬಂಧ ಡಿಎಂಕೆಯ ಮಹತ್ವದ ಕಾರ್ಯಕಾರಣಿ ಸಭೆ ಸೋಮವಾರ ಆರಂಭವಾಗಿದೆ.

ಈ ಮಧ್ಯೆ, ಪಕ್ಷ ವರಿಷ್ಠ ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ.ಅಳಗಿರಿ ಅವರು ಈ ಸಭೆಗೆ ಗೈರು ಆಗುವ ಮೂಲಕ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಪಕ್ಷ ನಿರ್ಧಾರದ ಬಗ್ಗೆ ತಮ್ಮ ಅಸಮಾದಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಅಳಗಿರಿ ಅವರು ಇಂದು ಬೆಳಗ್ಗೆ ಚೆನ್ನೈಯಿಂದ ವಿಮಾನದ ಮೂಲಕ ಮದುರೈಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಡಿಎಂಕೆ ಯುಪಿಎ ಸರ್ಕಾರದಿಂದ ಹೊರ ಬಂದಾಗ ಮದುರೈನ ಪ್ರಭಾವಿ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ ಅಳಗಿರಿ, ತಾವು ಒಬ್ಬರೇ ಪ್ರತ್ಯೇಕವಾಗಿ ತೆರಳಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜಿನಾಮೆ ನೀಡಿದ್ದರು.

ಇನ್ನು ಸಭೆಗೆ ಗೈರು ಆಗುತ್ತಿರುವ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ, ನಾನು ಒಬ್ಬನೇ ಡಿಎಂಕೆ ಸಭೆಗೆ ಗೈರು ಆಗುತ್ತಿದ್ದನೆಯೇ? ಬೇರೆ ನಾಯಕರೆಲ್ಲ ಭಾಗವಹಿಸಿದ್ದಾರೆಯೇ? ಎಂದು ಮರು ಪ್ರಶ್ನಿಸುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಡಿಎಂಕೆಯಲ್ಲಿ ಈ ಸಹೋದರರ ಭಿನ್ನಮತ ಹೊಸದೇನು ಅಲ್ಲ. ಇತ್ತೀಚಿಗೆ ಕರುಣಾನಿಧಿ ಅವರು ಸ್ಟಾಲಿನ್ ತಮ್ಮ ಮುಂದಿನ ಉತ್ತರಾಧಿಕಾರಿ ಎಂದು ಹೇಳುವ ಮೂಲಕ ಅಳಗಿರಿ ಅಸಮಾದಾನಕ್ಕೆ ಕಾರಣವಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.