ಜರ್ದಾರಿ ಜತೆ ಜಗಳ: ಪಾಕ್ ತೊರೆದ ಬಿಲಾವಲ್ ಭುಟ್ಟೋ

ಇಸ್ಲಾಮಾಬಾದ್/ಲಾಹೋರ್: ತಂದೆ ಹಾಗೂ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರೊಂದಿಗಿನ ಮನಸ್ತಾಪದಿಂದಾಗಿ ಅವರ ಪುತ್ರ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಮಂಗಳವಾರ ದೇಶ ತೊರೆದಿದ್ದಾರೆ.
ಪಿಪಿಪಿಯಲ್ಲಿ ಉಂಟಾದ ಗೊಂದಲಗಳಿಂದ ತಂದೆ ಅಸಿಫ್ ಅಲಿ ಜರ್ದಾರಿ ಅವರೊಡನೆ ಜಗಳವಾಡಿದ ಬಿಲಾವಲ್, ಪಾಕ್ ತೊರೆದು ದುಬೈಗೆ ಹಾರಿರುವುದು, ಬಿಲಾವಲ್ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಇತ್ತೀಚೆಗಷ್ಟೇ ಬಿಲಾವಲ್ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಪಕ್ಷದ ಮುಖಂಡರಿಗೂ ಹಾಗೂ ಬಿಲಾವಲ್ ಅವರ ನಿಲುವುಗಳಿಗೆ ಸರಿಯಾಗಿ ಹೊಂದಾಣಿಕೆಯಾಗದೆ ಗೊಂದಲಗಳಿಗೆ ಸಿಲುಕಿದ್ದರು. ಈ ವಿಚಾರವಾಗಿ ಬಿಲಾವಲ್ ಅವರು ಸಹೋದರಿ ಫರ್ಯಾಲ್ ತಲ್ಪುರ್ ಮತ್ತು ತಂದೆ ಅಸೀಫ್ ಮಧ್ಯೆ ಪರಸ್ಪರ ವೈಮನಸ್ಯ ಬೆಳದಿತ್ತು.
ಭಯೋತ್ಪಾದಕರ ದಾಳಿ, ಶೀಯಾ ಮುಸ್ಲಿಂ ಜನಾಂಗದ ಮೇಲೆ ನಡೆಯುತ್ತಿರುವ ದಾಳಿ ಸೇರಿದಂತೆ ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸುವ ಅಭ್ಯರ್ಥಿಗಳಿಗೆ ನೀಡುವ ಟಿಕೆಟ್ ವಿಚಾರದಲ್ಲಿ ಭಿನ್ನಭಿಪ್ರಾಯ ಮೂಡಿದೆ. ಈ ಹಿನ್ನಲೆಯಲ್ಲಿ ಬಿಲಾವಲ್ ಪಾಕ್ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲ ಹೋರಾಟಗಾರ್ತಿ ಮಲಾಲ ಯುಸುಫ್ಜೈ ಮೇಲಿನ ದಾಳಿಯನ್ನು ಹಾಗೂ ಕ್ವೆಟ್ಟಾ ಮತ್ತು ಕರಾಚಿಯಲ್ಲಿ ಶೀಯಾ ಮುಸ್ಲಿಂ ಜನಾಂಗದ ಮೇಲೆ ದಾಳಿ ನಡೆದು 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಗಳನ್ನು ಪೀಪಲ್ಸ್ ಪಾರ್ಟಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿಲಾವಲ್ ದೂರಿದ್ದಾರೆ.
ಯುವಕರ ಮೇಲೆ ಪರಿಣಾಮ ಬೀರುವಂತಹ ವಿಷಯಗಳ ಬಗ್ಗೆ ಪಿಪಿಪಿ ನಿಲುವು ತೆಗೆದುಕೊಳ್ಳುತ್ತಿದೆ ಎಂದಿದ್ದರು. ಇದಲ್ಲದೇ, ಸಿಂದ್ ಪ್ರಾಂತದ ಪಕ್ಷದ ಮುಖಂಡರಿಗೆ ಟಿಕೆಟ್ ಹಂಚಿಕೆ ಮಾಡುವಲ್ಲಿ ಸಹೋದರಿಯೊಡನೆ ಕಲಹ ಉಂಟಾದ ಹಿನ್ನಲೆಯಲ್ಲಿ ಬಿಲಾವಲ್ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ತಂದೆಗೆ ಹೇಳಿದ್ದರು ಎನ್ನಲಾಗಿದೆ.
ಆದರೆ ಮಗಳ ಪರ ನಿಂತ ಅಸೀಫ್ ಜರ್ದಾರಿ, ಮಗನನ್ನು ಕಡೆಗಣಿಸಿದ್ದಾರೆ. ಇದರಿಂದ ಕೋಪಗೊಂಡ ಬಿಲಾವಲ್ ಪಾಕ್ ತೊರೆದಿದ್ದಾರೆ ಎಂದು ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


