ಜೀವ ತೆಗೆದ ಹೋಳಿ ಬಣ್ಣ
ಮುಂಬೈ: ಮುಂಬೈಯ ರೈಲಿನ ಫುಟ್ಬೋರ್ಡ್ನಲ್ಲಿ ನಿಂತು ಸಂಚರಿಸುತ್ತಿದ್ದ ಪ್ರಯಾಣಿಕರ ಮೇಲೆ ಕೆಲವರು ಹೋಳಿ ಬಣ್ಣ ಎರಚಿದ ಪರಿಣಾಮ ಓರ್ವ ಕೈ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ವರದಿಯಾಗಿದೆ.
ರಾಸಾಯನಿಕ ಪದಾರ್ಥವನ್ನೊಳಗೊಂಡ ಬಣ್ಣ ಅದಾಗಿದ್ದು, ಬಣ್ಣ ತಾಗಿದ ಕೂಡಲೇ ಪ್ರಯಾಣಿಕರಿಗೆ ಕಣ್ಣು ಉರಿ ಮತ್ತು ತುರಿಕೆ ಆರಂಭವಾಗಿದೆ. ರೈಲಿನ ಫುಟ್ಬೋರ್ಡ್ನಲ್ಲಿ ನಿಂತು ಸಂಚರಿಸುತ್ತಿದ್ದ ಕಾರಣ ಓರ್ವ ಪ್ರಯಾಣಿಕ ಹಿಡಿತ ಬಿಟ್ಟು ನೆಲಕ್ಕುರಿಳಿದ್ದಾನೆ. ರೈಲಿನಿಂದ ಬಿದ್ದ ಈತ ಸಾವನ್ನಪ್ಪಿದ್ದು, ಇನ್ನುಳಿದ 5 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ದಾದರ್-ಥಾಣೆ ನಡುವೆ ಸಂಚರಿಸುತ್ತಿದ್ದ ಲೋಕಲ್ ರೈಲಿನಲ್ಲಿ ಸೋಮವಾರ ರಾತ್ರಿ 8.00 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಈ ರೈಲಿನಲ್ಲಿ ಹಲವಾರು ಪ್ರಯಾಣಿಕರು ಫುಟ್ಬೋರ್ಡ್ನಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದರು.
ಆ ವೇಳೆ ಯಾರೋ ವಿರುದ್ಧ ದಿಶೆಯಿಂದ ಬಂದು ಬಣ್ಣ ಎರಚಿದ್ದು, ಇದರಿಂದ ಅಸ್ವಸ್ಥರಾದ ಪ್ರಯಾಣಿಕರು ರೈಲಿನಲ್ಲಿ ಹಿಡಿತ ತಪ್ಪಿ ಚಲಿಸುವ ರೈಲಿನಿಂದ ಬಿದ್ದಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಹೋಳಿ ಆಡುತ್ತಿರುವವರು ಹಳದಿ ಬಣ್ಣದ ಪೌಡರ್ ಎರಚಿದ್ದು, ಇದರಲ್ಲಿರುವ ರಾಸಾಯನಿಕ ಪದಾರ್ಥವೇ ಜನರು ಅಸ್ವಸ್ಥರಾಗಲು ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಚೆಂಬೂರ್ ನಿವಾಸಿ 26ರ ಹರೆಯದ ಜಿ. ನಿತ್ಯಾನಂದ್ ಗಣಪತಿ ರೈಲಿನಿಂದ ಬಿದ್ದು ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಅದೇ ವೇಳೆ ಗಾಯಗೊಂಡ ಐದು ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರೈಲ್ವೇ ಸರ್ಕಾರಿ ಪೊಲೀಸರು ಹಳದಿ ಬಣ್ಣದ ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದು, ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.
ಏತನ್ಮಧ್ಯೆ, ಓರ್ವ ವ್ಯಕ್ತಿಯ ಸಾವಿಗೆ ಕಾರಣವಾದ ರಾಸಾಯನಿಕಯುಕ್ತ ಬಣ್ಣ ಎಸೆದವರಾರು? ಎಲ್ಲಿಂದ ಎಸೆಯಲಾಯಿತು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

