ಈಗಿನ ಸುದ್ದಿ

ಲಂಕಾ ಆಟಗಾರರಿದ್ದಲ್ಲಿ ಐಪಿಎಲ್‌ಗೆ ಅವಕಾಶವಿಲ್ಲ: ಜಯಾ

Published On :

ಚೆನ್ನೈ: ಶ್ರೀಲಂಕಾವನ್ನು ಪ್ರತಿನಿಧಿಸುವ ಕ್ರಿಕೆಟ್ ಆಟಗಾರರು ತಮಿಳುನಾಡಿಗೆ ಬರದಿದ್ದರೇ ಮಾತ್ರ ತಮಿಳುನಾಡಿನಲ್ಲಿ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯ ನಡೆಸಲು ಅವಕಾಶ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮಂಗಳವಾರ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ತಮಿಳುನಾಡಿನ ಮೀನುಗಾರರನ್ನು ಹಿಂಸುಸುತ್ತಿರುವುದರಿಂದ ರೊಚ್ಚಿಗೆದ್ದಿರುವ ತಮಿಳುನಾಡು ಸರ್ಕಾರ, ಶ್ರೀಲಂಕಾ ಆಟಗಾರರ ತಮಿಳುನಾಡು ಭೇಟಿಗೆ ನಿರ್ಬಂಧ ಹೇರಿದೆ.

ಶ್ರೀಲಂಕಾದ ಆಟಗಾರರು, ಅಂಪೈರ್ ಸೇರಿದಂತೆ ಇತರೆ ಯಾವುದೇ ಅಧಿಕಾರಿಗಳು ತಮಿಳುನಾಡಿಗೆ ಭೇಟಿ ನೀಡಬಾರದು. ಅವರು ಇಲ್ಲವಾದರೆ ಮಾತ್ರ ಐಪಿಎಲ್ ಕಿಕ್ರೆಟ್ ಪಂದ್ಯಾವಳಿ ನಡೆಯಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಇಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಜಯಲಲಿತಾ ಪತ್ರ ಬರೆದಿದ್ದು, ಶ್ರೀಲಂಕಾ ವಿರುದ್ಧ ತಾವು ಕೈಗೊಂಡಿರುವ ದೃಢ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.

ಶ್ರೀಲಂಕಾ ಆಟಗಾರರನ್ನು ಪರಿಗಣಿಸದಂತೆ ಬಿಸಿಸಿಐಗೆ ಸೂಚಿಸಬೇಕು ಎಂದು ಜಯಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶ್ರೀಲಂಕಾದಲ್ಲಿನ ತಮಿಳರ ಮೇಲಿನ ದೌರ್ಜನ್ಯವನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಾಗಿವೆ. ಶ್ರೀಲಂಕಾ ಸರ್ಕಾರ ತಮ್ಮ ಯಾವುದೇ ಬೇಡಿಕೆಗೂ ಸ್ಪಂಧಿಸದಿರುವುದರಿಂದ ಜನರ ಆಕ್ರೋಶ ತೀವ್ರಗೊಂಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 3ರಿಂದ ಮೇ 26ರವರೆಗೆ ಚೆನ್ನೈನ ವಿವಿಧ ಭಾಗಗಳಲ್ಲಿ ಐಪಿಎಲ್ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಪತ್ರ ಬರೆದಿರುವ ಜಯಾ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.