ಡಿಎಂಡಿಕೆ ಶಾಸಕರ ವಜಾ ಶಿಕ್ಷೆ ಅವಧಿ ಇಳಿಕೆ
ಚೆನ್ನೈ: ವಿಧಾನಸಭೆಯಲ್ಲಿ ಪಕ್ಷದ ಮುಖಂಡರೊಬ್ಬರನ್ನು ಅವಹೇಳನ ಮಾಡಿದ ಆರೋಪದಲ್ಲಿ 1 ತಿಂಗಳ ಕಾಲ ವಜಾಗೈಯ್ಯಲ್ಪಟ್ಟ ಡಿಎಂಡಿಕೆ ಪಕ್ಷದ 6 ಶಾಸಕರ ವಜಾ ಶಿಕ್ಷೆ ಅವಧಿಯನ್ನು 6 ತಿಂಗಳಿಗೆ ಇಳಿಕೆ ಮಾಡಲಾಗಿದೆ.
ಡಿಎಂಡಿಕೆ ಶಾಸಕರಾದ ವಿ.ಸಿ ಚಂದ್ರಕುಮಾರ್, ಕೆ ನಲ್ಲತಂಬಿ, ಡಿ. ಮುರುಗೇಶನ್, ಎಸ್. ಸೆಂದಿಲ್ ಕುಮಾರ್, ಬಿ ಪಾರ್ಥಸಾರಥಿ ಮತ್ತು ಆರ್. ಅರುಳ್ಸೇವನ್ ಮೊದಲಾದ ಶಾಸಕರು ವಿಜಯಕಾಂತ್ ಅವರ ಪಕ್ಷದ ಶಾಸಕ ಸಿ. ಮೈಕಲ್ ರಾಯಪ್ಪನ್ ಎಂಬವರನ್ನು ನಿಂದನೆ ಮಾಡಿದ್ದರು.
ಶಾಸಕರ ವಜಾ ಶಿಕ್ಷೆ ಅವಧಿಯನ್ನು ಕಡಿತಗೊಳಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದು, ಶಾಸಕರ ಮನವಿಯನ್ನು ಪುರಸ್ಕರಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಸ್ಪೀಕರ್ ಪಿ.ಧನಪಾಲ್ ಅವರಿಗೆ ಆದೇಶ ನೀಡಿದ್ದರು.
ಈ ಬಗ್ಗೆ ವಿಧಾನಸಭೆಯಲ್ಲಿ ಗೊತ್ತುವಳಿ ಜಾರಿ ಮಂಡಿಸಿದ್ದು, ಸ್ಪೀಕರ್ 6 ಶಾಸಕರ ವಜಾ ಶಿಕ್ಷೆ ಅವಧಿಯನ್ನು 6 ತಿಂಗಳಿಗೆ ಇಳಿಕೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

