ಈಗಿನ ಸುದ್ದಿ

ದೇಶಾದ್ಯಂತ ಹೋಳಿ ಆಚರಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಶುಭಾಶಯ

ದೇಶಾದ್ಯಂತ ಹೋಳಿ ಆಚರಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಶುಭಾಶಯ
Published On :

ನವದೆಹಲಿ: ಪರಸ್ಪರ ಬಣ್ಣ ಎರಚುವ ಮೂಲಕ ದೇಶಾದ್ಯಂತ ಜನತೆ ಸಂಭ್ರಮದಿಂದ ಹೋಳಿ ಆಚರಿಸುತ್ತಿದ್ದು, ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಭಾಶಯ ಕೋರಿದ್ದಾರೆ.

'ಸಂಭ್ರಮದಿಂದ ಹೋಳಿ ಆಚರಿಸುತ್ತಿರುವ ದೇಶದ ನನ್ನ ಜನತೆಗೆ ಶುಭಾಶಯಗಳು. ವಸಂತ ಆಗಮನದ ಈ ಸುಭ ಗಳಿಗೆ ನಿಮ್ಮೇಲ್ಲರಲ್ಲೂ ಸಂತೋಷ, ಹೊಸ ಭರವಸೆ ಮೂಡಿಸಲಿ' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಶುಭಾಶಯ ಪತ್ರದಲ್ಲಿ ಹೇಳಿದ್ದಾರೆ.

ವಿವಿಧ ಬಣ್ಣಗಳಿಂದ ಕೂಡಿದ ಈ ಹೋಳಿ ನಮ್ಮ ವೈವಿದ್ಯತೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಣ್ಣಗಳ ಈ ಹಬ್ಬ ರಾಷ್ಟ್ರೀಯ ಮೌಲ್ಯವನ್ನು ಹೆಚ್ಚಿಸಲಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಣ್ಣಗಳ ಈ ಹೋಳಿ ನಮ್ಮಲ್ಲಿ ಹೊಸ ಚೈತನ್ಯ ಹಾಗೂ ಭ್ರಾತೃತ್ವ ಬೆಳೆಸಲಿ ಎಂದು ಪ್ರಧಾನಿ ಸಿಂಗ್ ಶುಭ ಕೋರಿದ್ದಾರೆ. ಇನ್ನು ದೇಶದ ಜನತೆಗೆ ನನ್ನ ಹೃದಯಪೂರ್ವಕ ಹೋಳಿ ಶುಭಾಶಯಗಳು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.